Corona Virus Effect: ಮೊಬೈಲ್ ಫೋನ್ ದರ ಹೆಚ್ಚಳ

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಪರಿಣಾಮ ಜೋರಾಗಿದ್ದು, ಶ ವೋಮಿ, ಕಾರ್ಬನ್, ಸೆಲ್‌ಕಾನ್ ಮೊದಲಾದ ಬ್ರ್ಯಾಂಡ್‌ಗಳ ದರ ಏರಿಕೆಯಾಗುತ್ತಿದೆ. ಜತೆಗೆ ಬಿಡಿಭಾಗಗಳ ಲಭ್ಯತೆಯೂ ಕಡಿಮೆಯಾಗಿದೆ . ಚೀನಾದ ನೋವೆಲ್ ಕೊರೊನಾ ವೈರಸ್ ದುಷ್ಪರಿಣಾಮ ಪಟ್ಟಣದ ಮೊಬೈಲ್ ಮಾರುಕಟ್ಟೆ ಮೇಲೆ ಬೀರಿದೆ. ಚೀನಾದಿಂದ ಆಮದಾಗುವ ಮೊಬೈಲ್ ಫೋನ್, ಮೊಬೈಲ್ ಪರಿಕರಗಳ ದರ ಸಾಮಾನ್ಯವಾಗಿ ಕಡಿಮೆ ಮತ್ತು ಮಾರಾಟದ ಮೇಲಿನ ಲಾಭವೂ ಹೆಚ್ಚು ಎನ್ನುವ ಕಾರಣಕ್ಕೆ ಆ ದೇಶದ ಮೊಬೈಲ್ ರಾಜ್ಯದಲ್ಲಿ ಹೆಚ್ಚು ಮಾರಾಟವಾಗುತ್ತಿವೆ. ಚೀನಾ ಉತ್ಪನ್ನಗಳಾದ ಶವೋಮಿ ರೆಡ್ಮಿ, ಕಾರ್ಬನ್, ಸೆಲ್‌ಕಾನ್ ಸೇರಿದಂತೆ ಹಲವು ಮಾಡೆಲ್‌ನ ಸೆಲ್‌ಫೋನ್‌ಗೆ ಇಲ್ಲಿ ಹೆಚ್ಚು ಬೇಡಿಕೆ. ಚೀನಾದಲ್ಲಿ ಕೊರೊನಾ ವೈರಸ್ ಹಾವಳಿ ಕಾರಣಕ್ಕೆ ಮೊಬೈಲ್ ಮತ್ತು ಬಿಡಿಭಾಗಗಳ ಆಮದು ನಿಂತಿದೆ. ಚೀನಾ ಮೂಲದ ಕಂಪನಿಯ ಮೊಬೈಲ್ ದರ 500ರಿಂದ 2000 ರೂ. ವರೆಗೂ ಹೆಚ್ಚ...