Corona Virus Effect: ಮೊಬೈಲ್ ಫೋನ್ ದರ ಹೆಚ್ಚಳ
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಪರಿಣಾಮ ಜೋರಾಗಿದ್ದು,
ಶವೋಮಿ, ಕಾರ್ಬನ್, ಸೆಲ್‌ಕಾನ್ ಮೊದಲಾದ ಬ್ರ್ಯಾಂಡ್‌ಗಳ ದರ
ಏರಿಕೆಯಾಗುತ್ತಿದೆ. ಜತೆಗೆ ಬಿಡಿಭಾಗಗಳ ಲಭ್ಯತೆಯೂ
ಕಡಿಮೆಯಾಗಿದೆ.
ಚೀನಾದ ನೋವೆಲ್ ಕೊರೊನಾ ವೈರಸ್ ದುಷ್ಪರಿಣಾಮ ಪಟ್ಟಣದ ಮೊಬೈಲ್ ಮಾರುಕಟ್ಟೆ ಮೇಲೆ ಬೀರಿದೆ. ಚೀನಾದಿಂದ ಆಮದಾಗುವ ಮೊಬೈಲ್ ಫೋನ್, ಮೊಬೈಲ್ ಪರಿಕರಗಳ ದರ ಸಾಮಾನ್ಯವಾಗಿ ಕಡಿಮೆ ಮತ್ತು ಮಾರಾಟದ ಮೇಲಿನ ಲಾಭವೂ ಹೆಚ್ಚು ಎನ್ನುವ ಕಾರಣಕ್ಕೆ ಆ ದೇಶದ ಮೊಬೈಲ್ ರಾಜ್ಯದಲ್ಲಿ ಹೆಚ್ಚು ಮಾರಾಟವಾಗುತ್ತಿವೆ.
ರಾಜ್ಯದ ವಿವಿಧ ಮೊಬೈಲ್ ಅಂಗಡಿಗಳಿಗೆ ಶಿವಮೊಗ್ಗ, ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಕಡೆಯಿಂದ ಚೀನಾ ಸೆಲ್‌ಫೋನ್ ಮತ್ತು ಬಿಡಿಭಾಗಗಳ ಸರಬರಾಜು ಆಗುತ್ತದೆ.
ಆದರೆ, ಇತ್ತೀಚೆಗೆ ಯಾವ ಕಡೆಯಿಂದಲೂ ಚೀನಾ ದೇಶದ ಮಾಲು ಸಿಗುತ್ತಿಲ್ಲ.
ಕೊರೊನಾ ವೈರಸ್ ಭೀತಿ ಮುಗಿಯುವವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ.
ಅಲ್ಲಿಯವರೆಗೆ ಸ್ಟಾಕ್ ಇರುವವರು ದರ ಹೆಚ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ.
Coronavirus Effect: ಶವೋಮಿ ರೆಡ್ಮಿ ಫೋನ್ ಬೆಲೆ ಏರಿಕೆ :
ಬಹುತೇಕ ಮೊಬೈಲ್‌ಗಳ ಮೇಲೆ ಮೇಡ್ ಇನ್ ಇಂಡಿಯಾ ಎಂದು ಬರೆದಿದ್ದರೂ ಹೆಚ್ಚಿನ ಮೊಬೈಲ್ ಮತ್ತು ಬಿಡಿಭಾಗಗಳು ಚೀನಾದಿಂದಲೇ ಆಮದಾಗುತ್ತವೆ. ಅದಕ್ಕಾಗಿ ದರ ಹೆಚ್ಚಾಳವಾಗಿದೆ. ಚೀನಾ ಮೂಲಕ ಮೊಬೈಲ್‌ಗಳನ್ನು ನಾವು ಕಳೆದ ಒಂದು ವಾರದಿಂದ ನಗದು ನೀಡಿ ಖರೀದಿಸುವಂತಾಗಿದೆ ಎಂದು ಶಿಕಾರಪುರದ ಮಲ್ಲಿಕಾರ್ಜುನ ಕಮ್ಯುನಿಕೇಶನ್‌ನ ಪವನ್ ಮಡ್ಡಿ ಅಭಿಪ್ರಾಯಪಟ್ಟಿದ್ದಾರೆ.
Smartphone Market: ಬಜೆಟ್ ಸ್ಮಾರ್ಟ್‌ಫೋನ್ ಮಾರಾಟ ಇಳಿಕೆ! :
ಇತ್ತೀಚೆಗೆ ಶವೋಮಿ ರೆಡ್ಮಿ ನೋಟ್ 8 ಫೋನ್ ಬೆಲೆಯಲ್ಲಿ ಏರಿಕೆ ಮಾಡಿದ್ದನ್ನು ಶವೋಮಿ ಅಧಿಕೃತವಾಗಿ ಪ್ರಕಟಿಸಿದ್ದು, ತಾತ್ಕಾಲಿಕವಾಗಿ ಬೆಲೆ ಏರಿಕೆ ಮಾಡಿದ್ದು, ಪೂರೈಕೆ ಸರಾಗವಾದ ಬಳಿಕ ಬೆಲೆ ಇಳಿಕೆ ಮಾಡುವುದಾಗಿ ತಿಳಿಸಿತ್ತು.
#SSKANEWS YOUTUBE LINK :- #SSKANEWS Official ( https://www.youtube.com/channel/UCKnhTNgiTCLZBzB8qS9f7bA?view_as=subscriber )
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ