WhatsApp Bug: ಬಳಕೆದಾರರ ಮಾಹಿತಿ ಕದಿಯುವ GIF

ಜನಪ್ರಿಯ ವಾಟ್ಸಪ್ ಮೆಸೇಜಿಂಗ್ ಆ್ಯಪ್‌ನಲ್ಲಿ ಹೊಸ ಸಮಸ್ಯೆಯೊಂದು 

ಕಾಣಿಸಿಕೊಂಡಿದ್ದು, ಜಿಫ್ ಫೈಲ್ ಮೂಲಕ ಬಳಕೆದಾರರ ಮಾಹಿತಿ 

ಕದಿಯಲಾಗುತ್ತಿದೆ. ಹೀಗಾಗಿ ಅಪರಿಚಿತ ಸಂದೇಶಗಳಿಂದ ದೂರವಿರುವುದು 

ಉತ್ತಮ.


ಫೇಸ್‌ಬುಕ್ ಒಡೆತನದ ಜನಪ್ರಿಯ ವಾಟ್ಸಪ್ ಆ್ಯಪ್‌ನಲ್ಲಿ ಹೊಸರೂಪದ ಸಮಸ್ಯೆಯೊಂದು ಕಾಣಿಸಿಕೊಂಡಿದೆ.
GIF ಫೈಲ್ ಒಂದನ್ನು ಹ್ಯಾಕರ್‌ಗಳು ಹರಿಯಬಿಟ್ಟಿದ್ದು, ಸ್ಮಾರ್ಟ್‌ಫೋನ್‌ಗೆ ವಾಟ್ಸಪ್ ಮೂಲಕ ಪ್ರವೇಶಿಸಿ ಗ್ಯಾಲರಿ ಸೇರಿಕೊಳ್ಳುವ ಅದು, ಬಳಕೆದಾರರ ಪ್ರಮುಖ ಮಾಹಿತಿಯನ್ನು ಕದಿಯುವ ಸಾಧ್ಯತೆಯಿದೆ. 


ಜಿಟ್‌ಹಬ್‌ನ ಅವೇಕನ್ಡ್‌ ಪೋಸ್ಟ್‌ನಲ್ಲಿ ಈ ಕುರಿತು ವರದಿಯಾಗಿದ್ದು, ವಾಟ್ಸಪ್‌ನ ಗ್ಯಾಲರಿ ಪ್ರಿವ್ಯೂನಲ್ಲಿ ಹೊಸ ಸ್ವರೂಪದ ಜಿಫ್ ಫೈಲ್ ಒಂದು ಪ್ರವೇಶಿಸಿ ಮಾಹಿತಿ ಕದಿಯುತ್ತಿದೆ ಎನ್ನಲಾಗಿದೆ.

ಮಾಲ್ವೇರ್ ಹೊಂದಿರುವ ಜಿಫ್ ಫೈಲ್, ಡೌನ್‌ಲೋಡ್ ಆದ ಕೂಡಲೇ ಗ್ಯಾಲರಿ ಪ್ರವೇಶಿಸುತ್ತದೆ. ನಂತರ ಬಳಕೆದಾರರ ಮಾಹಿತಿ ಕದಿಯಲು ಶಕ್ತವಾಗುತ್ತದೆ ಎಂದು ವರದಿ ತಿಳಿಸಿದೆ.
ವಾಟ್ಸಪ್ ಆವೃತ್ತಿ 2.19.230 ಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಅದಾದ ಬಳಿಕ 2.19.244 ಆವೃತ್ತಿಯಲ್ಲಿ ಈ ಸಮಸ್ಯೆಯನ್ನು ಸರಿಪಡಿಸಲಾಗಿದೆ.
ಆಂಡ್ರಾಯ್ಡ್ 8.1, ಆಂಡ್ರಾಯ್ಡ್ 9.0ದಲ್ಲೂ ವಾಟ್ಸಪ್ ಬಗ್ ಕೆಲಸ ಮಾಡಿದೆ. 


ವಾಟ್ಸಪ್ ಬಗ್‌ ಸಮಸ್ಯೆಗೆ ಪರಿಹಾರವೇನು?
ಅಪರಿಚಿತ ಸಂಖ್ಯೆಯಿಂದ ಬರುವ ಗಿಫ್ಟ್, ಸಂದೇಶ ನಿರ್ಲಕ್ಷಿಸಿ
ಕಾಲಕಾಲಕ್ಕೆ ವಾಟ್ಸಪ್ ಅಪ್‌ಡೇಟ್ ಮಾಡಿ.

ಗಿಫ್ಟ್ ಎಂದು ಬರುವ ಮತ್ತು ಉಚಿತ ಕೊಡುಗೆಗಳ ಸಂದೇಶವನ್ನು ತೆರೆಯಬೇಡಿ.
  • ಸ್ಮಾರ್ಟ್‌ಫೋನ್ ಓಎಸ್ ಅಪ್‌ಡೇಟ್, 
  • ಬಗ್ ಫಿಕ್ಸ್ ಅನ್ನು ಕೂಡ ಮಾಡಿ, 
  • ಭದ್ರತಾ ಅಪ್‌ಡೇಟ್ ಇನ್‌ಸ್ಟಾಲ್ ಮಾಡಿ. 




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?