WhatsApp: ಹೊಸ ಗ್ರೂಪ್ ಪ್ರೈವೆಸಿ ಅಪ್‌ಡೇಟ್ ... NEW UPGRADING SECURITY

ಜಗತ್ತಿನ ಜನಪ್ರಿಯ ಮೆಸೇಜಿಂಗ್ ಆ್ಯಪ್‌ ವಾಟ್ಸಪ್, ಕಾಲಕಾಲಕ್ಕೆ ಹೊಸ 

ಅಪ್‌ಡೇಟ್ ಪರಿಚಯಿಸುತ್ತಿರುತ್ತದೆ. 

ಈ ಬಾರಿ ಆಂಡ್ರಾಯ್ಡ್ ಮತ್ತು ಐಒಎಸ್‌ಗೆ ನೂತನ ಆಯ್ಕೆ ಬಿಡುಗಡೆ ಮಾಡುತ್ತಿದೆ.


ವಾಟ್ಸಪ್‌ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಾ ಹೋಗುತ್ತಿದ್ದು, ಗರಿಷ್ಠ ಸಂಖ್ಯೆಯಲ್ಲಿ ಬಳಕೆದಾರರನ್ನು ಪಡೆದುಕೊಳ್ಳುತ್ತಿದೆ. ಅದರ ಜತೆಗೇ ಮತ್ತಷ್ಟು ಹೊಸ ಫೀಚರ್‌ಗಳನ್ನು ಅದರಲ್ಲಿ ಸೇರ್ಪಡೆ ಮಾಡುತ್ತಿದೆ. 

ಈ ಬಾರಿ ವಾಟ್ಸಪ್ ಹೊಸ ಫೀಚರ್ ಅಪ್‌ಡೇಟ್ ಮೂಲಕ ಗ್ರೂಪ್‌ನಲ್ಲಿ ಪ್ರೈವೆಸಿ ಸೆಟ್ಟಿಂಗ್ಸ್ ಪರಿಚಯಿಸುತ್ತಿದೆ. ಅದರ ಜತೆಗೇ, ಬ್ಲಾಕ್‌ಲಿಸ್ಟ್ ಆಯ್ಕೆ ಕೂಡ ಬಂದಿದೆ.
ಆದರೆ ಹೊಸ ಆಯ್ಕೆಗಳು ಪ್ರಸ್ತುತ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು, ಪರೀಕ್ಷಾರ್ಥ ಬಳಕೆಯ ಬಳಿಕ, ಜನಸಾಮಾನ್ಯರಿಗೆ ಬಳಕೆಗೆ ಲಭ್ಯವಾಗಲಿದೆ.

ಯಾವ ಆವೃತ್ತಿಯಲ್ಲಿ ಲಭ್ಯ?
ವಾಟ್ಸಪ್ ಐಓಎಸ್ ಬೀಟಾ ಆವೃತ್ತಿ 2.19.110.20 ಮತ್ತು 
ಆಂಡ್ರಾಯ್ಡ್ ಬೀಟಾ 2.19.298 ಆವೃತ್ತಿಯಲ್ಲಿ ಲಭ್ಯವಿದೆ. 
ಬೀಟಾ ಬಳಕೆದಾರರಿಗೆ ಹೊಸ ಗ್ರೂಪ್ ಪ್ರೈವೆಸಿ ಆಯ್ಕೆಗಳು ದೊರೆಯುತ್ತಿದೆ. 

ಹೊಸದು ಏನಿದೆ?
ಹೊಸ ಆಯ್ಕೆ ಕುರಿತು ವಾಬೀಟಾ ಇನ್ಫೋ ಪ್ರಕಟಿಸಿದ್ದು, ಗ್ರೂಪ್ ಪ್ರೈವೆಸಿ ಸೆಟ್ಟಿಂಗ್ಸ್‌ನಲ್ಲಿ ಅಕೌಂಟ್-ಪ್ರೈವೆಸಿ-ಗ್ರೂಪ್ಸ್ ಮೂಲಕ, ನೋಬಡಿ, ಮೈ ಕಾಂಟಾಕ್ಟ್ ಮತ್ತು ಎವರಿವನ್ ಎಂಬ ಮೂರು ಆಯ್ಕೆ ಲಭ್ಯವಾಗಲಿದೆ.

ಅಲ್ಲದೆ ಹೊಸ ಬ್ಲಾಕ್‌ಲಿಸ್ಟ್ ಕೂಡ ಕಾಣಿಸಿಕೊಂಡಿದ್ದು, ಅನಗತ್ಯ ಚಾಟ್‌ಗಳನ್ನು ನಿರ್ಬಂಧಿಸಬಹುದಾಗಿದೆ. 






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?