ಕ್ಷಣಾರ್ಧದಲ್ಲಿ ಹ್ಯಾಕರ್ಸ್ ಪಾಲಾಗಲಿದೆ ನಿಮ್ಮ ಮಾಹಿತಿ: ಸಿಮ್ನಲ್ಲಿನ ಸಿಮ್ಜ್ಯಾಕರ್ ಪತ್ತೆ, ತೊಂದರೆಯಲ್ಲಿದೆ 700 ಮಿಲಿಯನ್ ಸಿಮ್ಕಾರ್ಡ್ಸ್!
ನವದೆಹಲಿ: ಇಂದಿನ ದಿನಗಳಲ್ಲಿ ನಾವು ಪ್ರತಿಯೊಂದನ್ನು ಆನ್ಲೈನ್ನಲ್ಲಿ ಖರೀದಿಸಲು ಇಂಟರ್ನೆಟ್ ಸುಲಭ ಮಾಡಿಬಿಟ್ಟಿದೆ. ಆದರೆ, ಇದೇ ಇಂಟರ್ನೆಟ್ನಲ್ಲಿ ಸ್ವಲ್ಪ ಯಾಮಾರಿದರು ಕೆಲವೇ ಸೆಕೆಂಡ್ಗಳಲ್ಲಿ ದೋಷವುಂಟಾಗಿ ನಮ್ಮ ಕೆಲ ಉಪಯುಕ್ತತೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಇಂದು ಸಾಕಷ್ಟು ಸೈಬರ್ ಕ್ರೈಂ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಇತ್ತೀಚಿನ ಘಟನೆಯೊಂದರಲ್ಲಿ ಅಡ್ಯಾಪ್ಟಿವ್ ಮೊಬೈಲ್ ಸೆಕ್ಯುರಿಟಿ ಸಂಸ್ಥೆ ಮೊಬೈಲ್ ಸಿಮ್ಗೆ ತೊಂದರೆ ಮಾಡುವ ಸಿಮ್ಜ್ಯಾಕರ್(SimJacker) ದೋಷವನ್ನು ಪತ್ತೆ ಹಚ್ಚಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಸಾಮಾನ್ಯವಾಗಿವೆ. ಇದರ ಮೇಲೆ ನಿಗಾ ಇಟ್ಟಿರುವ ಸೈಬರ್ಸೆಕ್ಯುರಿಟಿ ತನಿಖಾಧಿಕಾರಿಗಳು ಇತ್ತೀಚೆಗೆ ಪತ್ತೆ ಮಾಡಲು ಕಷ್ಟಕರವಾರ ದೋಷವನ್ನು ಸಿಮ್ಕಾರ್ಡ್ನಲ್ಲಿ ಪತ್ತೆಹಚ್ಚಿದ್ದಾರೆ.
ಈ ದೋಷವು ದೊಡ್ಡ ಪ್ರಮಾಣದಲ್ಲಿ ಮೊಬೈಲ್ಗೆ ಹಾನಿಯುಂಟುಮಾಡಲಿದ್ದು, ಇದರಿಂದ ಮೊಬೈಲ್ ಹ್ಯಾಕರ್ಸ್ಗೆ ಸಾಕಷ್ಟು ಲಾಭವಾಗಲಿದೆ. ಕೇವಲ ಒಂದು ಮಸೇಜ್ನಿಂದ ಸಾಕಷ್ಟು ಡೇಟಾಗಳು ಹ್ಯಾಕರ್ಸ್ ಪಾಲಾಗಲಿದೆ. ಅಡ್ಯಾಪ್ಟಿವ್ ಮೊಬೈಲ್ ಸೆಕ್ಯುರಿಟಿ ಪತ್ತೆ ಹಚ್ಚಿರುವ ದೋಷವನ್ನು ಸಿಮ್ಜ್ಯಾಕರ್ ಎಂದು ಕರೆಯಲಾಗಿದ್ದು, ಇದು ಎಸ್@ಟಿ ಬ್ರೌಸರ್(ಸಿಮ್ ಟೂಲ್ಕಿಟ್) ಎಂಬ ಸಾಫ್ಟ್ವೇರ್ನಲ್ಲಿ ನೆಲೆಸಿರುತ್ತದೆ. ಸುಮಾರು 30 ದೇಶಗಳಲ್ಲಿ ಬಳಸುವ ಸಿಮ್ ಕಾರ್ಡ್ಗಳಲ್ಲಿ ಈ ಸಾಫ್ಟ್ವೇರ್ ಅನ್ನು ಮೊಬೈಲ್ ಆಪರೇಟರ್ಸ್ ಬಳಸುತ್ತಿದ್ದು, ಮೊಬೈಲ್ ಬಳಕೆದಾರನಿಗೆ ಗೊತ್ತಿಲ್ಲದೆ, ಕೆಲವೊಂದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಬಹುದಾಗಿದೆ.
ಸುಮಾರು ಎರಡು ವರ್ಷಗಳಿಂದ ಸರ್ಕಾರದ ಜತೆ ಕಾರ್ಯನಿರ್ವಹಿಸುವ ಖಾಸಗಿ ಕಂಪನಿಯೊಂದು ಈ ಸಾಫ್ಟ್ವೇರ್ ಅನ್ನು ಬಳಸಿಕೊಳ್ಳುತ್ತಿದ್ದು, ಇವರು ಹಲವು ದೇಶದ ಮೊಬೈಲ್ ಬಳಕೆದಾರರನ್ನು ಹಲವು ದಿನಗಳಿಂದ ಗಮನಿಸುತ್ತಿದ್ದಾರೆ ಎಂಬ ಆತಂಕಕಾರಿ ವರದಿ ಬೆಳಕಿಗೆ ಬಂದಿದೆ.
ಈ ಸಾಫ್ಟ್ವೇರ್ನಿಂದ ಏನು ಮಾಡುತ್ತಾರೆ?
ಎಸ್@ಟಿ ಬ್ರೌಸರ್ ಅನ್ನು ಸಿಮ್ಅಲೈಯನ್ಸ್ ಟೂಲ್ಬಾಕ್ಸ್ ಬ್ರೌಸರ್ ಎಂದು ಕರೆಯಲಾಗುತ್ತದೆ. ಇದೊಂದು ಅಪ್ಲಿಕೇಶನ್ ಆಗಿದ್ದು, ಇದು ಸಿಮ್ ಟೂಲ್ ಕಿಟ್(ಎಸ್ಟಿಕೆ)ನಲ್ಲಿ ಇರುತ್ತದೆ. ಇದನ್ನು ಹಲವು ಸಿಮ್ಗಳು ಮತ್ತು ಇಸಿಮ್ಗಳಲ್ಲಿ ಇನ್ಸ್ಟಾಲ್ ಮಾಡಲಾಗಿರುತ್ತದೆ. ಇದನ್ನು ಪ್ರಾಥಮಿಕವಾಗಿ ಕೆಲ ಮೂಲ ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿರುತ್ತದೆ.
ಎಸ್@ಟಿ ಬ್ರೌಸರ್ ಅನ್ನು ಸಿಮ್ಅಲೈಯನ್ಸ್ ಟೂಲ್ಬಾಕ್ಸ್ ಬ್ರೌಸರ್ ಎಂದು ಕರೆಯಲಾಗುತ್ತದೆ. ಇದೊಂದು ಅಪ್ಲಿಕೇಶನ್ ಆಗಿದ್ದು, ಇದು ಸಿಮ್ ಟೂಲ್ ಕಿಟ್(ಎಸ್ಟಿಕೆ)ನಲ್ಲಿ ಇರುತ್ತದೆ. ಇದನ್ನು ಹಲವು ಸಿಮ್ಗಳು ಮತ್ತು ಇಸಿಮ್ಗಳಲ್ಲಿ ಇನ್ಸ್ಟಾಲ್ ಮಾಡಲಾಗಿರುತ್ತದೆ. ಇದನ್ನು ಪ್ರಾಥಮಿಕವಾಗಿ ಕೆಲ ಮೂಲ ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿರುತ್ತದೆ.
ಎಸ್@ಟಿ ಬ್ರೌಸರ್ ವಿವಿಧ ಎಸ್ಕೆಟಿ ಸೂಚನೆಗಳನ್ನು ನಿರ್ವಹಿಸುತ್ತಿರುವತ್ತದೆ. ಶಾರ್ಟ್ ಮೆಸೇಜ್ ಕಳುಹಿಸುವುದು, ಕಾಲ್ ಸೆಟಪ್, ಲಾಂಚ್ ಬ್ರೌಸರ್, ಸ್ಥಳೀಯ ಡೇಟಾ ಒದಗಿಸುವುದು, ರನ್ ಅಟ್ ಕಮ್ಯಾಂಡ್ ಮತ್ತು ಡೇಟಾ ಕಳುಹಿಸುವ ಕೆಲಸ ಮಾಡುತ್ತದೆ. ಈ ಸೂಚನೆಯು ಮೊಬೈಲ್ ಸಾಧನಗಳಿಗೆ ಎಸ್ಎಂಎಸ್ ಕಳುಹಿಸುವ ಮೂಲಕ ಬಳಕೆದಾರನನ್ನು ಪ್ರಚೋದಿಸುತ್ತದೆ.
ಈ ಸಾಫ್ಟ್ವೇರ್ ಮೊಬೈಲ್ ಅನ್ನು ಟಾರ್ಗೆಟ್ ಮಾಡಿ, ಲೊಕೇಶನ್ ಮತ್ತು ಐಎಂಇಐ ಮಾಹಿತಿಯನ್ನು ಒದಗಿಸುತ್ತದೆ. ಬಳಕೆದಾರನ ಪರವಾಗಿ ಸುಳ್ಳು ಸಂದೇಶಗಳನ್ನು ಕಳುಹಿಸುವ ಮೂಲಕ ತಪ್ಪು ಮಾಹಿತಿಯನ್ನು ಹರಡುತ್ತದೆ. ದುರುದ್ದೇಶಪೂರಿತ ವೆಬ್ ಪುಟವನ್ನು ತೆರೆಯಲು ಬಳಕೆದಾರನನ್ನು ಬ್ರೌಸರ್ ಮೂಲಕ ಒತ್ತಾಯಿಸಿ ಮಾಲ್ವೇರ್ ಅನ್ನು ಹರಡುತ್ತದೆ. ಬಳಕೆದಾರನ ವಿರುದ್ಧವೇ ಗೂಢಾಚಾರಿಕೆ ಮಾಡುವುದು ಮುಂತಾದ ತೊಂದರೆಗಳು ಈ ಸಾಫ್ಟ್ವೇರ್ನಲ್ಲಿದೆ.
ಮೋಟೊರೋಲಾ, ಸ್ಯಾಮ್ಸಂಗ್, ಗೂಗಲ್, ಹುವೆಯಿ ಮತ್ತು ಆ್ಯಪಲ್ ಮೊಬೈಲ್ಗಳಲ್ಲಿ ಈ ಸಾಫ್ಟ್ವೇರ್ ಕಂಡುಬಂದಿದೆ. ಇದರಿಂದ ಸುಮಾರು 1 ಬಿಲಯನ್ ಮಂದಿ ಸದ್ಯ ತೊಂದರೆಯಲ್ಲಿದ್ದಾರೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ದೋಷವನ್ನು ಒಪ್ಪಿಕೊಂಡಿರುವ ಸಿಮ್ಅಲೈಯನ್ಸ್ ಎಸ್@ಟಿ ಪುಶ್ ಮಸೇಜ್ಗಳಿಗೆ ಸೆಕ್ಯುರಿಟಿ ಅನುಷ್ಠಾನಕ್ಕೆ ಸಿಮ್ ತಯಾರಿಸುವವರಿಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ