WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?
ವಾಟ್ಸಪ್ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ಮಾರ್ಟ್‌ಫೋನ್ ಮತ್ತು ಇಂಟರ್‌ನೆಟ್ ಬಳಸುತ್ತಾರೆ ಎಂದಾದರೆ ಅವರು ಖಂಡಿತವಾಗಿಯೂ ವಾಟ್ಸಪ್ ಬಳಸುತ್ತಾರೆ. ಹೀಗಿರುವಾಗ ವಾಟ್ಸಪ್ ಕಾಲಕಾಲಕ್ಕೆ ಬಳಕೆದಾರರ ಅನುಕೂಲಕ್ಕಾಗಿ ವಿವಿಧ ಆಯ್ಕೆಗಳನ್ನು ಮತ್ತು ಅಪ್‌ಡೇಟ್‌ಗಳನ್ನು ಜನರಿಗೆ ನೀಡುತ್ತದೆ. ಅದಕ್ಕೂ ಮುಂಚೆ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಬೀಟಾ ಆವೃತ್ತಿ ಮೂಲಕ ಹೊಸ ಅಪ್‌ಡೇಟ್ ನೀಡಿ, ಅದನ್ನು ಪರಿಶೀಲನೆಗೆ ಒಳಪಡಿಸುತ್ತದೆ. ಈ ಬಾರಿ ಹಂತಹಂತವಾಗಿ ವಾಟ್ಸಪ್ ನೀಡಲು ಉದ್ದೇಶಿಸಿರುವ ಅಪ್‌ಡೇಟ್‌ಗಳ ವಿವರ ಇಲ್ಲಿದೆ.
ಕಾಂಟಾಕ್ಟ್ ಶಾರ್ಟ್‌ಕಟ್ :
ಐಓಎಸ್ ವಾಟ್ಸಪ್ ಬೀಟಾ ಆವೃತ್ತಿ 2.20.70.18 ಮತ್ತು 2.20.70.19 ಇದರಲ್ಲಿ ಹೇಳಿರುವಂತೆ, ಇತರ ಆ್ಯಪ್‌ಗಳ ಮೂಲಕ ಲಿಂಕ್ ಕಳುಹಿಸಿದರೆ, ಅವರ ವಾಟ್ಸಪ್ ಕಾಂಟಾಕ್ಟ್ ಅನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಜತೆಗೆ ಶೇರ್ ಶೀಟ್‌ನಲ್ಲಿ ಫೋಟೋ ಮತ್ತಿತರ ವಿವರ ಕೂಡ ಅಪ್‌ಡೇಟ್ ಆಗುತ್ತಿರುತ್ತದೆ.
ಮೆನು ಮರುವಿನ್ಯಾಸ :
ಐಓಎಸ್ 13ರಲ್ಲಿ ಈಗ ಯಾವುದೇ ವಾಟ್ಸಪ್ ಮೆಸೇಜ್ ಅನ್ನು ಒತ್ತಿ ಹಿಡಿದಾಗ ಸ್ಟಾರ್, ರಿಪ್ಲೈ, ಕಾಪಿ, ಫಾರ್‌ವರ್ಡ್ ಮತ್ತು ಇನ್ಫೋ ಹಾಗೂ ಡಿಲೀಟ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದೇ ರೀತಿಯನ್ನು ಐಓಎಸ್ 12ರ ಆವೃತ್ತಿಯಲ್ಲೂ ವಾಟ್ಸಪ್ ಪರಿಚಯಿಸುತ್ತಿದೆ.
ಸರ್ಚ್ ಬೈ ಡೇಟ್ :
ನಿಗದಿತ ದಿನಾಂಕವನ್ನು ನೀಡಿ, ಅದರ ಮೂಲಕ ಸರ್ಚ್ ಆಯ್ಕೆಯನ್ನು ವಾಟ್ಸಪ್ ಪರಿಚಯಿಸುತ್ತಿದೆ. ಟೆಕ್ಸ್ಟ್, ವಿಡಿಯೋ ಸಹಿತ ವಿವಿಧ ಆಯ್ಕೆಗಳ ಸರ್ಚ್ ಸೌಲಭ್ಯ ದೊರೆಯಲಿದೆ.
ಸ್ಟೋರೇಜ್ ಯೂಸೇಜ್ :
ಸ್ಟೋರೇಜ್ ಸಮಸ್ಯೆಗೆ ಪರಿಹಾರ ಒದಗಿಸಲು, ಸಾರ್ಟ್ ಫಿಲ್ಟರ್ ಬಟನ್, ಒದಗಿಸಲಾಗುತ್ತದೆ. ಇದರ ಮೂಲಕ ಕಳುಹಿಸಿದ, ಸ್ವೀಕರಿಸಿದ ದೊಡ್ಡ ಗಾತ್ರದ ಫೈಲ್ ಅನ್ನು ಸುಲಭದಲ್ಲಿ ಹುಡುಕಬಹುದು.
ಕ್ಲೀಯರ್ ಎಕ್ಸೆಪ್ಟ್ ಸ್ಟಾರ್ :
ಸ್ಟಾರ್ ಮಾಡಿದ ಮೆಸೇಜ್ ಹೊರತುಪಡಿಸಿ, ಇತರ ಎಲ್ಲ ಮೆಸೇಜ್ ಅನ್ನು ಅಳಿಸಿಹಾಕುವ ಆಯ್ಕೆ ಲಭ್ಯವಾಗಲಿದೆ. ಪ್ರಸ್ತುತ ವೈಯಕ್ತಿಕ ಮತ್ತು ಗ್ರೂಪ್ ಚಾಟ್‌ಗೆ ಈ ಆಯ್ಕೆ ಲಭ್ಯ.
ಶೇರ್‌ಚಾಟ್ ವಿಡಿಯೋ :
ಇನ್ ಆ್ಯಪ್ ಮೂಲಕ ಯೂಟ್ಯೂಬ್ ವಿಡಿಯೋ, ಪ್ರಿವ್ಯೂ ನೋಡುವಂತೆ, ಶೇರ್‌ಚಾಟ್ ವಿಡಿಯೋ ನೋಡುವ ಆಯ್ಕೆಯನ್ನು ವಾಟ್ಸಪ್ ಒದಗಿಸುತ್ತದೆ.
ಮಲ್ಟಿ ಡಿವೈಸ್ ಸಪೋರ್ಟ್ :
ಈ ಆಯ್ಕೆಯ ಮೂಲಕ ಬಳಕೆದಾರರು ಒಮ್ಮೆಗೆ ನಾಲ್ಕು ಡಿವೈಸ್‌ಗಳಲ್ಲಿ ಒಂದೇ ವಾಟ್ಸಪ್ ಸಂಖ್ಯೆಯನ್ನು ಬಳಸಬಹುದು. ಈ ರೀತಿಯ ಅಪ್‌ಡೇಟ್ ಅನ್ನು ವಾಟ್ಸಪ್ ಪರಿಶೀಲಿಸುತ್ತಿದ್ದು, ಶೀಘ್ರವೇ ನೀಡಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ