Vivo Phone : ಒಂದೇ IMEI ಬಳಸಿ, 13,500ಕ್ಕೂ ಫೋನ್ ತಯಾರಿಸಿ ಗಂಭೀರ ಸ್ವರೂಪದ ಭದ್ರತಾ ಲೋಪ

ಒಂದೇ IMEI ಬಳಸಿ, 13,500ಕ್ಕೂ ಫೋನ್ ತಯಾರಿಸಿ ಗಂಭೀರ ಸ್ವರೂಪದ ಭದ್ರತಾ ಲೋಪ 
ಎಸಗಿರುವ ಚೀನಾ ಮೂಲದ ವಿವೋ ಕಂಪನಿ ವಿರುದ್ಧ 
ಮೀರತ್ ಸೈಬರ್ ಪೊಲೀಸರು ಸೂಕ್ತ ಪ್ರಕರಣ ದಾಖಲಿಸಿ ತನಿಖೆ ನಡೆಸಲಿದ್ದಾರೆ.
ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಫೋನ್‌ಗಳನ್ನು ಮಾರಾಟ ಮಾಡಿರುವ ಚೀನಾ ಮೂಲದ ವಿವೋ ಕಂಪನಿಯ ವಿರುದ್ಧ ಮೀರತ್ ಸೈಬರ್‌ಕ್ರೈಂ ಪೊಲೀಸರು ನಡೆಸಿದ ತನಿಖೆಯಲ್ಲಿ ಅಘಾತಕಾರಿ ಸಂಗತಿಯೊಂದು ಬಯಲಾಗಿದೆ. ಒಂದಲ್ಲ, ಎರಡಲ್ಲಾ, ಬರೋಬ್ಬರಿ 13,500ಕ್ಕೂ ಅಧಿಕ ಸ್ಮಾರ್ಟ್‌ಫೋನ್‌ಗಳನ್ನು ವಿವೋ ಒಂದೇ IMEI ಸಂಖ್ಯೆ ಬಳಸಿ ಉತ್ಪಾದಿಸಿದೆ ಎನ್ನಲಾಗಿದೆ.!

IMEI ಸಂಖ್ಯೆ ಎನ್ನುವುದು ಇಂಟರ್‌ನ್ಯಾಶನಲ್ ಮೊಬೈಲ್ ಇಕ್ವಿಪ್‌ಮೆಂಟ್ ಐಟೆಂಟಿಟಿ ನಂಬರ್ ಆಗಿದೆ. 
15 ಅಂಕಿಗಳ ವಿಶಿಷ್ಟ ಕೋಡ್ ನಂಬರ್ ಇದಾಗಿದ್ದು, ಒಂದು ಫೋನ್‌ಗೆ ಒಂದೇ IMEI ಎನ್ನುವ ನಿಯಮವಿದೆ. ಡ್ಯುಯಲ್ ಸಿಮ್ ಆಗಿದ್ದರೂ, ಎರಡು IMEI ಸಂಖ್ಯೆಯನ್ನು ಒಂದೇ ಫೋನ್ ಹೊಂದಿರುತ್ತದೆ. 
ಆದರೆ ವಿವೋ ಮಾತ್ರ ಒಂದೇ IMEI ಸಂಖ್ಯೆ ಬಳಸಿಕೊಂಡು ಇ‍ಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮೊಬೈಲ್ ಫೋನ್ ತಯಾರಿಸಿರುವುದು ಆತಂಕಕ್ಕೆ ಕಾರಣವಾಗಿದೆ. 
(ಹೀಗಾಗಿ ಮೀರತ್ ಪೊಲೀಸರು ಚೀನಾ ಮೂಲದ ವಿವೋ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.)

5 ತಿಂಗಳಿನಿಂದ ತನಿಖೆ!
ಮೀರತ್ ಸೈಬರ್‌ಕ್ರೈಂ ಪೊಲೀಸರು ಕಳೆದ 5 ತಿಂಗಳಿನಿಂದ ಸತತ ತನಿಖೆ ನಡೆಸಿ, ಈ ವಂಚನೆಯನ್ನು ಪತ್ತೆಹಚ್ಚಿದ್ದಾರೆ. 
IMEI ಸಂಖ್ಯೆ ಎನ್ನುವುದು ಒಂದು ಫೋನ್‌ಗೆ ಒಂದೇ ಇರುವುದರಿಂದ, ವಿವಿಧ ಸಂದರ್ಭದಲ್ಲಿ ಅದನ್ನು ಗಮನಿಸಬೇಕಾಗುತ್ತದೆ. 
ಪ್ರಮುಖವಾಗಿ ಸ್ಮಾರ್ಟ್‌ಫೋನ್ ಕಳೆದುಹೋದರೆ, ಕಳವಾದರೆ ಮತ್ತು ಅಪರಾಧ ತನಿಖೆಯಲ್ಲಿ ಮೊಬೈಲ್‌ನ IMEI ಸಂಖ್ಯೆ ಪ್ರಮುಖ ಪಾತ್ರ ವಹಿಸುತ್ತದೆ. 
ಜತೆಗೆ ಕಳವು ಮಾಡುವ ಮೊಬೈಲ್‌ನ IMEI ಸಂಖ್ಯೆಯನ್ನು ತಿರುಚಿ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತದೆ.

ವಿವೋ ವಿರುದ್ಧ ಪ್ರಕರಣ
ಒಂದೇ IMEI ಬಳಸಿ, 13,500ಕ್ಕೂ ಫೋನ್ ತಯಾರಿಸಿ ಗಂಭೀರ ಸ್ವರೂಪದ ಭದ್ರತಾ ಲೋಪ ಎಸಗಿರುವ ವಿವೋ ವಿರುದ್ಧ ಮೀರತ್ ಪೊಲೀಸರು ಸೂಕ್ತ ತನಿಖೆ ನಡೆಸಲಿದ್ದಾರೆ.

ಆದರೆ ಈ ಕುರಿತು ವಿವೋ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. 

ನಿಮ್ಮ ಫೋನ್ IMEI ಸಂಖ್ಯೆ ಪತ್ತೆ ಹಚ್ಚುವುದು ಹೇಗೆ?
ಫೋನ್ ಬಾಕ್ಸ್‌ನ ಹಿಂಭಾಗದ ಸ್ಟಿಕರ್‌ನಲ್ಲಿ IMEI ಸಂಖ್ಯೆ ನಮೂದಿಸಲಾಗಿರುತ್ತದೆ. ಬಿಲ್‌ನಲ್ಲೂ IMEI ಸಂಖ್ಯೆ ಇರುತ್ತದೆ.
ಅದನ್ನು ಹೊರತುಪಡಿಸಿ, *#06# ಸಂಖ್ಯೆಯನ್ನು ಡಯಲ್ ಮಾಡಿದರೆ ನಿಮ್ಮ ಆಂಡ್ರಾಯ್ಡ್ ಮತ್ತು ಐಫೋನ್‌ನಲ್ಲಿ IMEI ಸಂಖ್ಯೆ ಕಾಣಿಸಿಕೊಳ್ಳುತ್ತದೆ. 


*Ban Chinese products... *Exit the Dragon...





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?