Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

ರಿಲಯನ್ಸ್ ಜಿಯೋ ಇತರ ನೆಟ್‌ವರ್ಕ್‌ಗೆ ಕರೆ ಮಾಡಿದರೆ ಶುಲ್ಕ ವಿಧಿಸುವ ಕ್ರಮಕ್ಕೆ 

ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಕಾಲೆಳೆದಿದ್ದವು. 

ಆದರೆ ಜಿಯೋ  ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ.


ರಿಲಯನ್ಸ್ ಜಿಯೋ ಟ್ರಾಯ್ ನಿಯಮದ ಪ್ರಕಾರ ಇತರ ನೆಟ್‌ವರ್ಕ್‌ಗೆ ಹೊರಹೋಗುವ ಕರೆಗೆ ಶುಲ್ಕ ವಿಧಿಸಲು ಮುಂದಾಗಿರುವುದಕ್ಕೆ ಏರ್‌ಟೆಲ್, ವೊಡಾಫೋನ್-ಐಡಿಯಾ ಕಾಲೆಳೆದಿದ್ದವು. 

ಜಿಯೋ ಹೊರತುಪಡಿಸಿ, ಇತರ ನೆಟ್‌ವರ್ಕ್‌ಗೆ ವಾಯ್ಸ್ ಕರೆ ಮಾಡಿದರೆ, ಅದಕ್ಕೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸುವುದಾಗಿ ಹೇಳಲಾಗಿತ್ತು. ಆದರೆ ಆ ಕ್ರಮವನ್ನು ಇತರ ಟೆಲಿಕಾಂ ಕಂಪನಿಗಳು ತಮಾ‍ಷೆಯಾಗಿ ಬಳಸಿಕೊಂಡು, ಸಾಮಾಜಿಕ ತಾಣದಲ್ಲೂ ಪೋಸ್ಟ್ ಹಾಕಿಕೊಂಡಿದ್ದವು. ಆದರೆ ಅವರ ಹೇಳಿಕೆಗೆ ರಿಲಯನ್ಸ್ ಜಿಯೋ ತಕ್ಕ ಉತ್ತರ ನೀಡಿದ್ದು, ಸರಣಿ ಟ್ವೀಟ್ ಮಾಡಿದೆ. 

ಇಂಟರ್ ಆಪರೇಟರ್ ಕರೆಗಾಗಿ, ಇಂಟರ್‌ಕನೆಕ್ಟ್ ಯೂಸೇಜ್ ಚಾರ್ಜ್ ಪಾವತಿಸಲು ಜಿಯೋ ಶುಲ್ಕ ವಿಧಿಸುತ್ತಿದೆ. ಇದು ಟ್ರಾಯ್ ನಿಯಮವಾಗಿದೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ರಿಲಯನ್ಸ್ ಜಿಯೋ, ನಾವೇನು ಶುಲ್ಕ ಕೇಳುತ್ತಿಲ್ಲ. ಆದರೆ ಅವರು ಕೇಳುತ್ತಿದ್ದಾರೆ. ಹೀಗಾಗಿ ನಾವು ಪಾವತಿಸಬೇಕಿದೆ ಎಂದು ರಿಲಯನ್ಸ್ ಹೇಳಿದೆ. 

ರಿಲಯನ್ಸ್ ಜಿಯೋ ವಾಯ್ಸ್ ಕರೆಗೆ ಶುಲ್ಕ ವಿಧಿಸುವ ಪ್ರಸ್ತಾಪದ ಬೆನ್ನಲ್ಲೇ ಏರ್‌ಟೆಲ್, ವೊಡಾಫೋನ್ ಐಡಿಯಾ ಜಾಹೀರಾತು ನೀಡುವ ಮೂಲಕ ನೆಟ್‌ವರ್ಕ್ ಪೋರ್ಟ್ ಮಾಡುವಂತೆ ಸೂಚಿಸಿದ್ದವು. 

ಆದರೆ ಜಿಯೋ ಅದಕ್ಕೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಿ, ಶುಲ್ಕ ವಿಧಿಸುತ್ತಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿದೆ.

















ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?