ಏಕಕಾಲದಲ್ಲಿ ಹಲವು ಸಿಸ್ಟಮ್​ಗಳಲ್ಲಿ ವಾಟ್ಸ್ಆ್ಯಪ್​ನ ಒಂದೇ ಖಾತೆ ಬಳಸಬಹುದು!: ಹೊಸ ಫೀಚರ್​ ಶೀಘ್ರ ಬಳಕೆಗೆ

ನವದೆಹಲಿ: ವಾಟ್ಸ್​ಆ್ಯಪ್, ಜಗತ್ತಿನ ಅತಿಹೆಚ್ಚು ಬಳಕೆಯಾಗುವ ಮೆಸೇಜಿಂಗ್ ಆ್ಯಪ್​. ಬಳಕೆದಾರರಿಗೆ ಕಾಲಕಾಲಕ್ಕೆ ಹೊಸಹೊಸ ಫೀಚರ್​ಗಳು ಜೋಡಿಸಿ ಜನರನ್ನು ಆಕರ್ಷಸುತ್ತಿದೆ. ಇದೀಗ ಮತ್ತೊಂದು ಆಕರ್ಷಕ ಫೀಚರ್ ಒದಗಿಸಲು ವಾಟ್ಸ್​​ಆ್ಯಪ್ ಸಿದ್ದತೆ ನಡೆಸುತ್ತಿದೆ. ಹೊಸ ಫೀಚರ್​​ ಒಂದೇ ವಾಟ್ಸ್ಆ್ಯಪ್ ಖಾತೆಯನ್ನು ಏಕಕಾಲದಲ್ಲಿ ಹಲವು ಸಾಧನಗಳಲ್ಲಿ ಬಳಸಬಹುದು.

ಹೊಸ ಫೀಚರ್ ಅಭಿವೃದ್ಧಿಯಲ್ಲಿ ವಾಟ್ಸ್​ಆ್ಯಪ್ ತಲ್ಲೀನವಾಗಿರುವ ಸುದ್ದಿ ತಿಂಗಳುಗಳಿಂದ ಹರಿದಾಡುತ್ತಿದೆ. ಅದನ್ನೀಗ ವಾಟ್ಸ್​​ಆ್ಯಪ್ ಬೀಟಾ ಇನ್​ಫರ್ಮೇಷನ್ ಖಚಿತಪಡಿಸಿದ್ದು, ಒಂದು ಖಾತೆಯನ್ನು ಹಲವು ಸಾಧನಗಳಲ್ಲಿ ಬಳಸಲು ಸಾಧ್ಯವಾಗುವ ಫೀಚರ್​ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದಿದೆ. ಹಲವು ಸಾಧನಗಳಲ್ಲಿ ಬಳಕೆಯಾದರೂ ಸಂದೇಶಗಳು ಸಂಪೂರ್ಣವಾಗಿ ಎಂಡ್​​ ಟು ಎಂಡ್​ ಎನ್​ಕ್ರಿಪ್ಟ್​​ ಆಗಿರುತ್ತವೆ ಎಂದು ಹೇಳಿದೆ.

ಹೊಸ ಫೀಚರ್​​ನಿಂದ ಒಂದೇ ವಾಟ್ಸ್​​​ಆ್ಯಪ್​ ಅಕೌಂಟ್​ಅನ್ನು ಎರಡಕ್ಕಿಂತ ಹೆಚ್ಚು ಸಾಧನಗಳಲ್ಲಿ ಬಳಸಬಹುದು. ಉದಾಹರಣೆಗೆ ಐಫೋನ್ ಮತ್ತು ಐಪ್ಯಾಡ್​​ನಲ್ಲಿ ಅಥವಾ ಯಾವುದಾದರು ಎರಡು ಮೊಬೈಲ್​ಗಳಲ್ಲಿ ಏಕಕಾಲದಲ್ಲಿ ಒಂದೇ ವಾಟ್ಸ್​​ಆ್ಯಪ್ ಅಕೌಂಟ್​​ ಬಳಸಬಹುದು. ಪ್ರಸ್ತುತ ಡೆಸ್ಕ್​ಟಾಪ್​ನಲ್ಲಿ ವಾಟ್ಸ್​​ಆ್ಯಪ್ ವೆಬ್​ ಮತ್ತು ಸ್ಮಾರ್ಟ್​ ಫೋನ್​ನಲ್ಲಿ ಬಳಕೆಗೆ ಅವಕಾಶಕಲ್ಪಿಸಿದೆ.

ಹೊಸ ಫೀಚರ್​​ ಅಭಿವೃದ್ಧಿ ಹಂತದಲ್ಲಿದ್ದು, ಯಾವಾಗ ಬಳಕೆಗೆ ಸಿಗಲಿದೆ ಎಂಬುದು ಸ್ಪಷ್ಟವಾಗಿಲ್ಲ.ಹೊಸ ಫೀಚರ್ ಹೇಗಿರಲಿದೆ ಎಂಬ ಸ್ಕ್ರೀನ್​ಶಾಟ್​ಗಳನ್ನು ಮುಂದಿನ ವಾರಗಳಲ್ಲಿ ವಾಟ್ಸ್​​ಆ್ಯಪ್ ಬೀಟಾ ಇನ್​​ಫರ್ಮೇಷನ್ ಶೇರ್ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಕ್ಲೌಡ್​​ ಬೇಸ್ಡ್​​ ಮೆಸೆಂಜಿಂಗ್ ಆ್ಯಪ್ ಆಗಿರುವ ಟೆಲಿಗ್ರಾಮ್ ಈ ಫೀಚರ್​ ಅನ್ನು ಹಲವು ತಿಂಗಳುಗಳ ಹಿಂದೆಯೇ ಕಲ್ಪಿಸಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?