Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!
ಕೆಲವೊಂದು ಚಾನಲ್‌ಗಳಲ್ಲಿನ ಪ್ರಸಾರ ಚೆನ್ನಾಗಿಲ್ಲ ಎಂದು ಕೂಡ ಗ್ರಾಹಕರು ಹೇಳಿದ್ದರಿಂದ,
ಜೂನ್ 15ರ ಬಳಿಕ ಟಾಟಾ ಸ್ಕೈ ಕೆಲವೊಂದು ಚಾನಲ್‌ಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ಈ ಮೂಲಕ ಪ್ಯಾಕ್ ದರದಲ್ಲಿ ಇಳಿಕೆ ಮಾಡಲು ಟಾಟಾ ಸ್ಕೈ ಚಿಂತನೆ ನಡಿಸಿದೆ.
ಲಾಕ್‌ಡೌನ್ ಜಾರಿಯಾದ ಬಳಿಕ ದೇಶದಲ್ಲಿ ವಿಡಿಯೋ ಮತ್ತು ಆನ್‌ಲೈನ್ ಸ್ಟ್ರೀಮಿಂಗ್ ಸೇವೆಗಳ ವೀಕ್ಷಣೆಯಲ್ಲಿ ಹೆಚ್ಚಳವಾಗಿದೆ.
ಆದರೆ ಟಿವಿ ವೀಕ್ಷಣೆಯ ಮೇಲೆ ಪರಿಣಾಮ ಬೀರಿದ್ದು, ಧಾರವಾಹಿಗಳ ಶೂಟಿಂಗ್ ನಡೆಯದ ಕಾರಣ ಪ್ರಸಾರ ನಿಂತುಹೋಗಿದೆ. ಹೀಗಾಗಿ ಟಿವಿ ಚಾನಲ್‌ಗಳಲ್ಲಿ ಧಾರವಾಹಿ ಮರುಪ್ರಸಾರವಾಗುತ್ತಿದೆ.
ಲಾಕ್‌ಡೌನ್ ಅವಧಿಯಲ್ಲಿ ಟಾಟಾ ಸ್ಕೈನ ಬಹುತೇಕ ಚಂದಾದಾರರು ವೆಚ್ಚ ಕಡಿತಕ್ಕೆ ಮುಂದಾಗಿದ್ದು, ಚಾನಲ್ ಪ್ಯಾಕ್‌ನಲ್ಲಿ ಕಡಿತ ಮಾಡಿದ್ದಾರೆ.
ಕೆಲವೊಂದು ಚಾನಲ್‌ಗಳಲ್ಲಿನ ಪ್ರಸಾರ ಚೆನ್ನಾಗಿಲ್ಲ ಎಂದು ಕೂಡ ಗ್ರಾಹಕರು ಹೇಳಿದ್ದರಿಂದ, ಜೂನ್ 15ರ ಬಳಿಕ
ಟಾಟಾ ಸ್ಕೈ ಕೆಲವೊಂದು ಚಾನಲ್‌ಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ಈ ಮೂಲಕ ಪ್ಯಾಕ್ ದರದಲ್ಲಿ ಇಳಿಕೆ ಮಾಡಲು ಟಾಟಾ ಸ್ಕೈ ಚಿಂತನೆ ನಡಿಸಿದೆ.
ಮೂಲಗಳ ಪ್ರಕಾರ ಅಂದಾಜು 70 ಲಕ್ಷಕ್ಕೂ ಅಧಿಕ ಚಂದಾದಾರರಿಗೆ ಚಾನಲ್ ವೆಚ್ಚ ಕಡಿತದ ಪ್ರಯೋಜನ ದೊರೆಯಲಿದೆ.
ತಿಂಗಳ ಬಿಲ್ 350 ರೂ. ಅಥವಾ ಅದಕ್ಕೂ ಕಡಿಮೆ ಇರುವ ಪ್ಯಾಕ್ ಬಳಸುತ್ತಿರುವ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಟಾಟಾ ಸ್ಕೈ ಈ ಕ್ರಮಕ್ಕೆ ಮುಂದಾಗಿದೆ.
*ಗ್ರಾಹಕರನ್ನು ಉಳಿಸಿಕೊಳ್ಳಲು ಈ ಕ್ರಮ :-
ಸುಮಾರು 15 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಕಳೆದುಕೊಂಡಿದೆ. ಅಲ್ಲದೆ, ಸಾಕಷ್ಟು ಮಂದಿ ಚಂದಾದಾರರು ಪ್ಯಾಕ್ ರಿಚಾರ್ಜ್ ಮಾಡಿಸಿಕೊಂಡಿಲ್ಲ.
ಲಾಕ್‌ಡೌನ್ ಅವಧಿಯಲ್ಲಿ ಉಳಿತಾಯದ ಕ್ರಮಕ್ಕೆ ಮುಂದಾಗಿದ್ದಾರೆ. ಹೀಗಾಗಿ ಟಾಟಾ ಸ್ಕೈ ಬಹುತೇಕ ಚಂದಾದಾರರನ್ನು ಕಳೆದುಕೊಂಡಿದೆ.
ಅದರಂತೆ ಗ್ರಾಹಕರನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದ್ದು, ಅದಕ್ಕೆ ಪೂರಕವಾಗಿ ಕೆಲವೊಂದು ಚಾನಲ್‌ಗಳನ್ನು ಕಡಿತ ಮಾಡಿ, ಪ್ಯಾಕ್ ದರ ಇಳಿಕೆ ಮಾಡಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ