Paytm Mall: ಸಾಂಪ್ರದಾಯಿಕ ಚಿಲ್ಲರೆ ವ್ಯಾಪಾರಿಗಳಿಗೆ ನೆರವು
ಹಬ್ಬದ ವಿಶೇಷ ಮಾರಾಟದಲ್ಲಿ ಸ್ಥಳೀಯ ಮತ್ತು ಸಣ್ಣ ಉದ್ಯಮ, ಚಿಲ್ಲರೆ
ವ್ಯಾಪಾರಿಗಳನ್ನು ಕೂಡ ಸೇರಿಸಿಕೊಳ್ಳಲು ಪೇಟಿಎಂ ನಿರ್ಧರಿಸಿದೆ. ಇದರಿಂದಾಗಿ
ಗ್ರಾಮೀಣ ಭಾಗದ ಉತ್ಪನ್ನಗಳು ಕೂಡ ಪೇಟಿಎಂ ಮೂಲಕ ದೊರೆಯಲಿದೆ.
ದೀಪಾವಳಿ ಸಂದರ್ಭದಲ್ಲಿ ಸಾಂಪ್ರದಾಯಿಕ ಚಿಲ್ಲರೆ ವ್ಯಾಪಾರಿಗಳ ಮಾರಾಟ ಹೆಚ್ಚಿಸಲು ಪೇಟಿಎಂ ಮಾಲ್ ನೆರವು ಒದಗಿಸಲಿದೆ. ಪೇಟಿಎಂ ಮಾಲ್ ಜೊತೆ ಸಹಭಾಗಿತ್ವ ಹೊಂದಿರುವ ಚಿಲ್ಲರೆ ವ್ಯಾಪಾರಿಗಳ ನೆರವಿಗಾಗಿ ಸಂಸ್ಥೆಯು ಈ ದೀಪಾವಳಿಯಲ್ಲಿ ಸುಮಾರು 500 ಕೋಟಿ ರೂಪಾಯಿಗೂ ಅಧಿಕ ಮಾರಾಟ ದಾಖಲಿಸುವ ಗುರಿ ಹೊಂದಿದೆ.
ಇದಕ್ಕಾಗಿ ಸಣ್ಣ ನಗರ ಮತ್ತು ಗ್ರಾಮೀಣ ಭಾಗದ ಗ್ರಾಹಕರನ್ನು ಸೆಳೆಯುವ ಉದ್ದೇಶವನ್ನು ಸಹ ಹೊಂದಿದೆ. ಶೇಕಡ 35 ರಷ್ಟು ಮಾರಾಟವು ಮಹಾನಗರದಿಂದ ಬರುತ್ತಿರುವುದರಿಂದ ಉಳಿದ ಮಾರಾಟವನ್ನು ಗ್ರಾಮೀಣ ಮತ್ತು ಸಣ್ಣ ನಗರಗಳಿಂದ ದಾಖಲಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.
ಸುಮಾರು 30,000 ಕ್ಕಿಂತಲೂ ಹೆಚ್ಚಿನ ಚಿಲ್ಲರೆ ವ್ಯಾಪಾರಿಗಳು ಪೇಟಿಎಂ ಮಾಲ್ ಜೊತೆ ಸಹಭಾಗಿತ್ವ ಹೊಂದಿದ್ದಾರೆ. ದೀಪಾವಳಿ ಮಾರಾಟ ಸಂದರ್ಭದಲ್ಲಿ ಚಿಲ್ಲರೆ ವ್ಯಾಪಾರಿಗಳು ಪೇಟಿಎಂ ಮಾಲ್ ಮೂಲಕ ಆಕರ್ಷಕ ರಿಯಾಯಿತಿಯನ್ನು ಘೋಷಣೆ ಮಾಡಿ ಗ್ರಾಹಕರನ್ನು ಸೆಳೆಯಬಹುದು.
ದೀಪಾವಳಿ ಮಾರಾಟದ ಉದ್ದೇಶಕ್ಕಾಗಿ ಹೊಸ ಬ್ರ್ಯಾಂಡ್ ಮತ್ತು ಚಿಲ್ಲರೆ ವ್ಯಾಪಾರಿಗಳನ್ನು ನಮ್ಮ ವೇದಿಕೆಯಲ್ಲಿ ನೊಂದಾಯಿಸಿಕೊಳ್ಳವ ಪ್ರಕ್ರಿಯೆ ಭರದಿಂದ ಸಾಗಿದೆ. ಉತ್ತಮ ಶ್ಯಾಪಿಂಗ್ ಅನುಭವ ನೀಡುವ ಉದ್ದೇಶದಿಂದ ಎಕ್ಸ್ ಕ್ಲೂಸಿವ್ ಬ್ರ್ಯಾಂಡ್ ವೋಚರ್ ಕೂಡ ನೀಡುತ್ತಿದ್ದೇವೆ ಎಂದು ಪೇಟಿಎಂ ಮಾಲ್ ನ ಹಿರಿಯ ಉಪಾಧ್ಯಕ್ಷ ಶ್ರೀನಿವಾಸ್ ಮೋಥೆ ಹೇಳಿದ್ದಾರೆ.
ಈ ದೀಪಾವಳಿಯಲ್ಲಿ ಇಬೇ ಉತ್ಪನ್ನಗಳು ಕೂಡ ಪೇಟಿಎಂ ಮಾಲ್ ನಲ್ಲಿ ಗ್ರಾಹಕರು ಶಾಪಿಂಗ್ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ