ರಾಮಮಂದಿರ ನಿರ್ಮಿಸೋದು ನೂರಕ್ಕೆ ನೂರರಷ್ಟು ಸತ್ಯ: ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್
ಬಾಗಲಕೋಟೆ: ರಾಮಮಂದಿರ ನಿರ್ಮಾಣ ಮಾಡೋದು ನೂರಕ್ಕೆ ನೂರರಷ್ಟು ಸತ್ಯ ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಗುಳೇದಗುಡ್ಡ ಪಟ್ಟಣದಲ್ಲಿ ಪುನರುಚ್ಛರಿಸಿದ್ದಾರೆ.
ಗ್ರಾಮದಲ್ಲಿ ಭಾನುವಾರ ಪಥಸಂಚಲದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ರಾಮಮಂದಿರ ನಿರ್ಮಿಸುವ ಪರವಾಗಿಯೇ ತೀರ್ಪು ಕೊಡಬೇಕು. ಅದನ್ನ ಬಿಟ್ಟು ಸುಪ್ರೀಂಕೋರ್ಟ್ಗೆ ಬೇರೆ ದಾರಿಯೇ ಇಲ್ಲ. ಅದಕ್ಕೆ ಸಂಬಂಧಸಿದ ಎಲ್ಲ ದಾಖಲೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದರು.
ಸದ್ಯ ಅಯೋಧ್ಯೆಯಲ್ಲಿ ರಾಮನ ಮೂರ್ತಿ ಇರುವ ಜಾಗದಲ್ಲೇ ರಾಮ ಮಂದಿರ ನಿರ್ಮಿಸಲು ಈ ಹಿಂದೆ ಹೈಕೋರ್ಟ್ ಹೇಳಿದೆ.ಈಗ ಅದನ್ನ ಬದಲು ಮಾಡುವುದಾದರೂ ಹೇಗೆ? ರಾಮಮಂದಿರ ನಿರ್ಮಾಣದಲ್ಲಿ ಅನುಮಾನವೇ ಬೇಡ ಎಂದು ಹೇಳಿದರು.
ಸದ್ಯ ಅಯೋಧ್ಯೆಯಲ್ಲಿ ರಾಮನ ಮೂರ್ತಿ ಇರುವ ಜಾಗದಲ್ಲೇ ರಾಮ ಮಂದಿರ ನಿರ್ಮಿಸಲು ಈ ಹಿಂದೆ ಹೈಕೋರ್ಟ್ ಹೇಳಿದೆ.ಈಗ ಅದನ್ನ ಬದಲು ಮಾಡುವುದಾದರೂ ಹೇಗೆ? ರಾಮಮಂದಿರ ನಿರ್ಮಾಣದಲ್ಲಿ ಅನುಮಾನವೇ ಬೇಡ ಎಂದು ಹೇಳಿದರು.
ಬಿಹಾರ ಪ್ರವಾಹದ ಬಗ್ಗೆ ಪ್ರಧಾನಿ ಟ್ವೀಟ್ ಮಾಡುತ್ತಾರೆ. ಆದರೆ ಕರ್ನಾಟಕದ ನೆರೆ ಬಗ್ಗೆ ಟ್ವೀಟ್ ಮಾಡಿಲ್ಲ ಎಂದು ಟೀಕಿಸುತ್ತಿದ್ದಾರೆ. ಪ್ರಧಾನಿಗಳು ಇಲ್ಲಿಗೆ ಬಂದೇ ಪರಿಹಾರ ಕೊಡಬೇಕಾ? ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಿ ವರದಿ ಮಾಡಿದ್ದಾರೆ. ಪ್ರಧಾನಿ ಮೋದಿ ವಿಶ್ವನಾಯಕ. ಪ್ರತಿ ಬಾರಿ ಇಲ್ಲಿಗೆ ಬರಬೇಕು ಎನ್ನುವುದು ಸರಿಯಲ್ಲ ಎಂದರು.
ಪ್ರಧಾನಿ ಮೋದಿ ನನ್ನ ಮನವಿಗೆ ಸ್ಪಂದಿಸಿದರು. ಆದರೆ ಸಿಎಂ ಯಡಿಯೂರಪ್ಪ ಮನವಿಗೆ ಯಾಕೆ ಸ್ಪಂದಿಸುತ್ತಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸುತ್ತಾರೆ. ಯಡಿಯೂರಪ್ಪ ಮನವಿಗೆ ಸ್ಪಂದಿಸದಿದ್ದರೆ ರಾಜ್ಯಕ್ಕೆ 1200 ಕೋಟಿ ರೂ. ಹೇಗೆ ಬಿಡುಗಡೆ ಮಾಡಿದರು? ರಾಜ್ಯದ ನೆರೆ ಪೀಡಿತ ಪ್ರದೇಶಗಳಿಗೆ ಕುಮಾರಸ್ವಾಮಿ, ಸಿದ್ದರಾಮಯ್ಯ, ದೇವೇಗೌಡ ಭೇಟಿ ಕೊಟ್ಟಿದ್ದಾರಾ? ಯಡಿಯೂರಪ್ಪ ಬಗ್ಗೆ ಮಾತನಾಡುವ ಯೋಗ್ಯತೆ ಇವರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಪರಿಹಾರ ಹಂತಹಂತವಾಗಿ ಬರಲಿದೆ. ದೇಶದ 5 ರಾಜ್ಯಗಳಲ್ಲಿ ಪ್ರವಾಹ ಉಂಟಾಗಿರುವುದರಿಂದ ಸ್ವಲ್ಪ ತಡ ಆಗಲಿದೆ. ಕೇಂದ್ರ ಸರ್ಕಾರ ಜನಪರವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ದೇಶದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಕೆಲಸಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ