ಪೋಸ್ಟ್‌ಗಳು

ಸೆಪ್ಟೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಸ್‌ಬಿಎಂ ಎಟಿಎಂ ಗ್ರಾಹಕರೇ, ಹಣ ವಿಥ್‌ ಡ್ರಾ ಮಾಡಲು ಮೊಬೈಲ್‌ ಮರೆಯದೇ ಕೊಂಡೊಯ್ಯಿರಿ: ಏಕೆ ಗೊತ್ತಾ?

ಇಮೇಜ್
  ಎಸ್‌ಬಿಐ ಎಟಿಎಂನಿಂದ ಹಣ ಪಡೆಯುವಾಗ ಹೆಚ್ಚಿನ ಭದ್ರತೆ, ಸುರಕ್ಷತೆಯನ್ನು ಖಾತರಿ ಪಡಿಸಲು ಇದು ಅಗತ್ಯವಿದೆ. ಈ ಸೌಲಭ್ಯವನ್ನು ಜಾರಿಗೆ ತರುವುದರಿಂದ ಎಸ್‌ಬಿಐ ಗ್ರಾಹಕರು ವಂಚನೆಗೆ ಒಳಗಾಗುವುದು ತಪ್ಪುತ್ತದೆ. ಮುಂಬಯಿ:  ದೇಶದ ಪ್ರತಿಷ್ಠಿತ ಮತ್ತು ಅತ್ಯಂತ ಬೃಹತ್ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ ಗ್ರಾಹಕರೇ ಇನ್ನು ಮುಂದೆ ಕೆಲವು ಹೊಸ ನಿಯಮಗಳಿಗೆ ಒಗ್ಗಿಕೊಳ್ಳಬೇಕಾಗಿದೆ. ಏಕೆಂದರೆ ಇದೇ ಸೆಪ್ಟೆಂಬರ್‌ 18ರಿಂದ  ಎಸ್‌ಬಿಐ  ಕೆಲವು ಕಡ್ಡಾಯ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಎಸ್‌ಬಿಐ ಗ್ರಾಹಕರು  ಎಟಿಎಂನಿಂದ ಹಣ ಪಡೆಯಬೇಕಾದರೆ ಕಡ್ಡಾಯವಾಗಿ ಮೊಬೈಲ್‌ ಹೊಂದಿರಲೇಬೇಕು. ಏಕೆಂದರೆ ಓಟಿಪಿ ಆಧಾರಿತ ಸೇವೆ ಜಾರಿಗೆ ಬರುತ್ತಿದೆ. ಅಂದರೆ 10 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ಪಡೆಯಬೇಕಾದರೆ ಓಟಿಪಿಯನ್ನು ಎಂಟರ್‌ ಮಾಡಬೇಕು. ಒಂದು ವೇಳೆ ನೀವು 10 ಸಾವಿರ ಪಡೆಯಬೇಕು ಎಂದಾರೆ ಡೆಬಿಟ್‌ ಕಾರ್ಡ್‌ ಪಿನ್‌ ಜತೆಗೆ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನೂ ನಮೂದಿಸಬೇಕು. ಆಗ ಈ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ನಂತರ ಅದನ್ನು ಕೂಡ ನಮೂದಿಸಬೇಕು. ಆ ನಂತರ ನಿಮಗೆ ಹಣ ಲಭ್ಯವಾಗಲಿದೆ. ಸೈಬರ್‌ ಅಪರಾಧ ಹಾಗೂ ಬ್ಯಾಂಕಿಂಗ್‌ ವಂಚನೆಯನ್ನು ತಪ್ಪಿಸಲು ಈ ರೀತಿಯ ಕ್ರಮ ಅಗತ್ಯ ಎಂದು ಈಗಾಗಲೇ ಬ್ಯಾಂಕ್‌ ಸ್ಪಷ್ಟನೆ ನೀಡಿದೆ. ಎಸ್‌ಬಿಐ ಎಟಿಎಂನಿಂದ ಹಣ ಪಡೆಯುವಾಗ ಹೆಚ್ಚಿ...

ಕೋವಿಡ್‌ ಅವಧಿಯ ಸಾಲದ ಬಡ್ಡಿ ಮನ್ನಾಗೆ ಕೇಂದ್ರದಿಂದ ಪರಿಶೀಲನೆ

ಇಮೇಜ್
  ಇಎಂಐ ಮುಂದೂಡಿಕೆ ಅವಧಿಯ ಬಡ್ಡಿ ಮನ್ನಾಗೊಳಿಸುವ ಬಗ್ಗೆ ತಜ್ಞರ ಸಮಿತಿ ಪರಾಮರ್ಶೆ ನಡೆಸುತ್ತಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯದರ್ಜೆ ಸಚಿವ ಅನುರಾಗ್‌ ಠಾಕೂರ್‌‌ ವಿವರಣೆ ನೀಡಿದ್ದಾರೆ. ಹೊಸದಿಲ್ಲಿ: ಕೋವಿಡ್‌-19 ಬಿಕ್ಕಟ್ಟಿನ ಲಾಕ್‌ಡೌನ್‌ ಅವಧಿಯಲ್ಲಿ ಮುಂದೂಡಲಾಗಿದ್ದ ಸಾಲಗಳ ಇಎಂಐಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಕ್ಕೆ ಸಂಬಂಧಿಸಿ ಸರಕಾರ ನೇಮಿಸಿರುವ ತಜ್ಞರ ಸಮಿತಿ ಪರಿಶೀಲಿಸಲಿದೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್‌ ಠಾಕೂರ್‌ ಲೋಕಸಭೆಗೆ ತಿಳಿಸಿದ್ದಾರೆ. ನಾನಾ ಪ್ರತಿಪಕ್ಷಗಳು ಲಾಕ್‌ಡೌನ್‌ ಅವಧಿಯಲ್ಲಿ ಜನರ ಸಾಲಗಳ ಬಡ್ಡಿ ಮನ್ನಾ ಮಾಡಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಸಚಿವ ಅನುರಾಗ್‌ ಠಾಕೂರ್‌ ಉತ್ತರಿಸಿದ್ದಾರೆ. ''ಲಾಕ್‌ ಡೌನ್‌ ಅವಧಿಯಲ್ಲಿ ಸಾಲದ ಇಎಂಐ ಮುಂದೂಡಿಕೆಗೆ ಬ್ಯಾಂಕ್‌ಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಸರಕಾರವು ಇಎಂಐ ಮುಂದೂಡಿಕೆಯ ಅವಧಿಯಲ್ಲಿ ಸಾಲದ ಬಡ್ಡಿ ಮನ್ನಾ ಮಾಡಿದರೆ ಉಂಟಾಗಲಿರುವ ಆರ್ಥಿಕ ಪರಿಣಾಮಗಳ ಬಗ್ಗೆ ಪರಿಶೀಲಿಸಲಿದೆ" ಎಂದು ಅನುರಾಗ್‌ ಠಾಕೂರ್‌ ಸೋಮವಾರ ತಿಳಿಸಿದರು. ಕಾಂಗ್ರೆಸ್‌, ಟಿಎಂಸಿ, ಆರ್‌ಎಸ್‌ಪಿ, ಬಿಜೆಪಿ, ಎಐಎಂಐಎಂ ಪಕ್ಷದ ಸದಸ್ಯರು ಈ ಸಂಬಂದ ಪ್ರಶ್ನೆಗಳನ್ನು ಕೇಳಿದ್ದರು. ಸಾಲದ ಇಎಂಐ ಮುಂದೂಡಿಕೆ ಅವಧಿಯ ಬಡ್ಡಿ ಮನ್ನಾ ಮಾಡುವ, ಇಎಂಐ ಮುಂದೂಡಿಕೆಯನ್ನು ಮತ್ತಷ್ಟು ವಿಸ್ತರಿಸುವ ಪ್ರಸ್ತಾಪ ಸರಕಾರದ ಮುಂದಿದೆಯೇ? ಸಾಲದ ಪುನಾರಚನೆಗೆ ಬೇಡಿಕೆಗಳಿವೆಯ...