ಕೋವಿಡ್ ಅವಧಿಯ ಸಾಲದ ಬಡ್ಡಿ ಮನ್ನಾಗೆ ಕೇಂದ್ರದಿಂದ ಪರಿಶೀಲನೆ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಇಎಂಐ ಮುಂದೂಡಿಕೆ ಅವಧಿಯ ಬಡ್ಡಿ ಮನ್ನಾಗೊಳಿಸುವ ಬಗ್ಗೆ ತಜ್ಞರ ಸಮಿತಿ ಪರಾಮರ್ಶೆ ನಡೆಸುತ್ತಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯದರ್ಜೆ ಸಚಿವ ಅನುರಾಗ್ ಠಾಕೂರ್ ವಿವರಣೆ ನೀಡಿದ್ದಾರೆ.
ಹೊಸದಿಲ್ಲಿ: ಕೋವಿಡ್-19 ಬಿಕ್ಕಟ್ಟಿನ ಲಾಕ್‌ಡೌನ್ ಅವಧಿಯಲ್ಲಿ ಮುಂದೂಡಲಾಗಿದ್ದ ಸಾಲಗಳ ಇಎಂಐಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಕ್ಕೆ ಸಂಬಂಧಿಸಿ ಸರಕಾರ ನೇಮಿಸಿರುವ ತಜ್ಞರ ಸಮಿತಿ ಪರಿಶೀಲಿಸಲಿದೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್ ಠಾಕೂರ್ ಲೋಕಸಭೆಗೆ ತಿಳಿಸಿದ್ದಾರೆ.
ನಾನಾ ಪ್ರತಿಪಕ್ಷಗಳು ಲಾಕ್‌ಡೌನ್ ಅವಧಿಯಲ್ಲಿ ಜನರ ಸಾಲಗಳ ಬಡ್ಡಿ ಮನ್ನಾ ಮಾಡಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಸಚಿವ ಅನುರಾಗ್ ಠಾಕೂರ್ ಉತ್ತರಿಸಿದ್ದಾರೆ.
''ಲಾಕ್ ಡೌನ್ ಅವಧಿಯಲ್ಲಿ ಸಾಲದ ಇಎಂಐ ಮುಂದೂಡಿಕೆಗೆ ಬ್ಯಾಂಕ್‌ಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಸರಕಾರವು ಇಎಂಐ ಮುಂದೂಡಿಕೆಯ ಅವಧಿಯಲ್ಲಿ ಸಾಲದ ಬಡ್ಡಿ ಮನ್ನಾ ಮಾಡಿದರೆ ಉಂಟಾಗಲಿರುವ ಆರ್ಥಿಕ ಪರಿಣಾಮಗಳ ಬಗ್ಗೆ ಪರಿಶೀಲಿಸಲಿದೆ" ಎಂದು ಅನುರಾಗ್ ಠಾಕೂರ್ ಸೋಮವಾರ ತಿಳಿಸಿದರು.
ಕಾಂಗ್ರೆಸ್, ಟಿಎಂಸಿ, ಆರ್‌ಎಸ್‌ಪಿ, ಬಿಜೆಪಿ, ಎಐಎಂಐಎಂ ಪಕ್ಷದ ಸದಸ್ಯರು ಈ ಸಂಬಂದ ಪ್ರಶ್ನೆಗಳನ್ನು ಕೇಳಿದ್ದರು. ಸಾಲದ ಇಎಂಐ ಮುಂದೂಡಿಕೆ ಅವಧಿಯ ಬಡ್ಡಿ ಮನ್ನಾ ಮಾಡುವ, ಇಎಂಐ ಮುಂದೂಡಿಕೆಯನ್ನು ಮತ್ತಷ್ಟು ವಿಸ್ತರಿಸುವ ಪ್ರಸ್ತಾಪ ಸರಕಾರದ ಮುಂದಿದೆಯೇ? ಸಾಲದ ಪುನಾರಚನೆಗೆ ಬೇಡಿಕೆಗಳಿವೆಯೇ? ಮೋರಟೋರಿಯಂ ಅವಧಿಯ ಬಡ್ಡಿ ಮನ್ನಾ ಮಾಡಲು ಸಾಧ್ಯವೇ ಇಲ್ಲವೇ? ಎಂಬ ಪ್ರಶ್ನೆಗಳನ್ನು ಸಂಸದರು ಕೇಳಿದ್ದರು.
ಮೋರಟೋರಿಯಂ ಅವಧಿ ಸೆಪ್ಟೆಂಬರ್ 28ಕ್ಕೆ ಮುಕ್ತಾಯವಾಗುತ್ತಿದ್ದು, ಸಾಲಗಾರರಿಗೆ ಈಗ ಸಾಲದ ಹೊರೆ ಹೆಚ್ಚುವ ಆತಂಕ ಇದೆ. ಕೋವಿಡ್-19 ಕಾಲಘಟ್ಟದಲ್ಲಿ ಸಾಲ ಪಡೆಯುವುದು ದುಸ್ತರವಾಗಿದೆ. ಕೆಲ ಬ್ಯಾಂಕ್‌ಗಳು ಸಾಲದ ನಿಯಮಗಳನ್ನು ಬಿಗಿಗೊಳಿಸಿವೆ. ಸಾಲಗಾರರ ಕ್ರೆಡಿಟ್ ಸ್ಕೋರ್ ನಿರ್ಣಾಯಕವಾಗಿವೆ. ಆಗಸ್ಟ್ 31ಕ್ಕೆ ಮುಕ್ತಾಯವಾಗಲಿದ್ದ ಗಡುವನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 28ರ ತನಕ ಮುಂದೂಡಿದೆ. ಇಎಂಐ ಮುಂದೂಡುವುದರಿಂದ ಸಾಲಗಾರರಿಗೆ ಮತ್ತಷ್ಟು ವೆಚ್ಚ ಹೆಚ್ಚಳವಾಗಲಿದೆ.
ತಜ್ಞರ ಪ್ರಕಾರ ಮೋರಟೋರಿಯಂ ಅವಧಿ ಮುಗಿದ ನಂತರ ಸಾಲಗಾರರು, ಒಟ್ಟಿಗೇ ಆ ಅವಧಿಯ ಸಾಲವನ್ನು ಪಾವತಿಸುವುದು ಸೂಕ್ತ. ಆದರೆ ಸಾಲಗಾರರು ಹಣದ ಕೊರತೆ ಎದುರಿಸುತ್ತಿದ್ದಾರೆ.
https://www.facebook.com/groups/824107127684244
https://www.youtube.com/channel/UCKnhTNgiTCLZBzB8qS9f7bA?view_as=subscriber
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ