Top 2 ಟೆಕ್ನಾಲಜಿ News @2020 April

1. WhatsApp Video Call Limit : 8 ಮಂದಿಗೆ ಅವಕಾಶ : ಅತ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಚಾಟ್ ಅಪ್ಲಿಕೇಶನ್ ವಾಟ್ಸಪ್, ಇನ್ನು ಮುಂದೆ ವಿಡಿಯೋ ಕಾಲ್ ಬಳಕೆದಾರರಿಗೆ ಒಮ್ಮೆಗೆ ಎಂಟು ಜನರು ಪಾಲ್ಗೊಳ್ಳುವ ಆಯ್ಕೆ ನೀಡಲಿದೆ. ಈಗ ವಾಟ್ಸಪ್‌ನಲ್ಲಿ ಒಂದು ಬಾರಿ ನಾಲ್ಕು ಮಂದಿ ಮಾತ್ರ ವಿಡಿಯೋ ಕಾಲ್‌ನಲ್ಲಿ ಪಾಲ್ಗೊಳ್ಳಬಹುದು. ಆದರೆ ಮುಂದೆ ಪರಿಷ್ಕೃತ ಅಪ್‌ಡೇಟ್ ಒದಗಿಸುವ ಮೂಲಕ ವಾಟ್ಸಪ್ ಎಂಟು ಮಂದಿ ಏಕಕಾಲಕ್ಕೆ ವಿಡಿಯೋ ಅಥವಾ ಆಡಿಯೋ ಕಾಲ್‌ನಲ್ಲಿ ಭಾಗವಹಿಸುವ ಅವಕಾಶ ನೀಡಲಿದೆ. ವಿಡಿಯೋ ಕಾಲ್‌ಗೆ ಬೇಡಿಕೆ: ಭಾರತ ಮಾತ್ರವಲ್ಲದೆ, ಜಾಗತಿಕವಾಗಿ ವಿವಿಧ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಜಾರಿಯಾಗಿರುವುದರಿಂದ ಜನರು ಮನೆಬಿಟ್ಟು ಆಚೆ ಹೋಗುವಂತಿಲ್ಲ. ಅಲ್ಲದೆ, ವರ್ಕ್ ಫ್ರಮ್ ಹೋಮ್ ಆಯ್ಕೆಯೂ ಇರುವುದರಿಂದ, ಹೆಚ್ಚಿನ ಸಂದರ್ಭದಲ್ಲಿ ಕೆಲವೊಂದು ಮೀಟಿಂಗ್‌ಗೆ ವಿಡಿಯೋ ಕಾಲ್ ಅನಿವಾರ್ಯವಾಗಿದೆ. ಹೀಗಾಗಿ ವಿಡಿಯೋ ಕಾಲ್‌ಗೆ ಬೇಡಿಕೆ ಏರಿಕೆಯಾಗಿದೆ. ಈಗಾಗಲೇ ಝೂಮ್ ಆ್ಯಪ್ ಒಮ್ಮೆಗೆ 100 ಮಂದಿ ವಿಡಿಯೋ ಕಾಲ್‌ನಲ್ಲಿ ಸೇರಿಕೊಳ್ಳುವ ಅವಕಾಶ ನೀಡಿದೆ, ಹೌಸ್‌ಪಾರ್ಟಿಯೂ ಅಧಿಕ ಮಂದಿಯ ಜತೆ ವಿಡಿಯೋ ಕಾಲ್‌ಗೆ ಅವಕಾಶ ಕಲ್ಪಿಸಿದೆ. ಜತೆಗೆ ಗೂಗಲ್ ಡುವೋ, 12 ಮಂದಿ ಏಕಕಾಲಕ್ಕೆ ಕರೆಯಲ್ಲಿ ಪಾಲ್ಗೊಳ್ಳಬಹುದು. 2. Nokia Mobile: ಎಲ್ಲ ಫೋನ್‌ಗಳ ವಾರಂಟಿ 60 ದಿನ ವಿಸ್ತರಣೆ : ಈ ಅವಧಿಯಲ್ಲಿ ನಿಮ್ಮ ಫೋನ್ ವಾರಂ...