ಉಚಿತ ಟಾಕ್‌ಟೈಂ, ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ ಟೆಲಿಕಾಂ ಕಂಪನಿ

Free TalkTime Offer: ಉಚಿತ ಟಾಕ್‌ಟೈಂ, ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ ಟೆಲಿಕಾಂ ಕಂಪನಿ
ದೇಶದಲ್ಲಿ ಲಾಕ್‌ಡೌನ್‌ನಿಂದಾಗಿ ಜನರಿಗೆ ವಿವಿಧ ಸಮಸ್ಯೆಯಾಗುತ್ತಿದೆ. ಹೊರಗಡೆ ಹೋಗಲಾರದೆ ಜನರು ಮನೆಯಲ್ಲೇ ಇರುವಂತಾಗಿದೆ. ಆದರೆ ದಿನನಿತ್ಯದ ಅಗತ್ಯಗಳಿಗೆ ಕೆಲವೊಂದು ಸೇವೆಗಳನ್ನು ಹೊರತುಪಡಿಸಿ, ಇತರ ಯಾವುದೇ ಸೌಲಭ್ಯ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಜನರಿಗೆ ನೆರವಾಗಲು ಏರ್‌ಟೆಲ್, ಬಿಎಸ್‌ಎನ್‌ಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೋ ವಿವಿಧ ಯೋಜನೆ ಪ್ರಕಟಿಸಿವೆ. ವ್ಯಾಲಿಡಿಟಿ ವಿಸ್ತರಣೆ, ಉಚಿತ ಟಾಕ್‌ಟೈಂ ಮತ್ತು ಎಸ್‌ಎಂಎಸ್, ಡೇಟಾ ಪ್ಯಾಕ್ ಪರಿಷ್ಕರಣೆ, ಹೆಚ್ಚುವರಿ ಕೊಡುಗೆಯನ್ನು ಟೆಲಿಕಾಂ ಕಂಪನಿಗಳು ನೀಡುತ್ತಿದ್ದು, ಜನರಿಗೆ ಪ್ರಯೋಜನವಾಗುತ್ತಿದೆ.

Airtel 10 ರೂ. ಕ್ರೆಡಿಟ್ :
ದೇಶದ 8 ಕೋಟಿ ಏರ್‌ಟೆಲ್ ಪ್ರಿಪೇಯ್ಡ್ ಗ್ರಾಹಕರಿಗೆ ತಲಾ 10 ರೂ. ಕ್ರೆಡಿಟ್ ಅನ್ನು ಏರ್‌ಟೆಲ್ ನೀಡಲಿದೆ. ಇದರಿಂದ ಮುಖ್ಯ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ, ತುರ್ತು ಸಂದರ್ಭದಲ್ಲಿ ಏರ್‌ಟೆಲ್ ನೀಡಿರುವ ಮೊತ್ತ ಬಳಸಿಕೊಂಡು, ಕರೆ ಮಾಡಬಹುದು. ಎಸ್‌ಎಂಎಸ್ ಕಳುಹಿಸಬಹುದು. ಏರ್‌ಟೆಲ್ ಪ್ರಿಪೇಯ್ಡ್ ಗ್ರಾಹಕರ ವ್ಯಾಲಿಡಿಟಿ ಮುಗಿಯುತ್ತಿದ್ದಲ್ಲಿ, ಯಾವುದೇ ಹೆಚ್ಚುವರಿ ರಿಚಾರ್ಚ್ ಮಾಡದೆಯೇ ಏ. 17, 2020ರವರೆಗೆ ಇನ್‌ಕಮಿಂಗ್ ವ್ಯಾಲಿಡಿಟಿ ವಿಸ್ತರಿಸಲಾಗುತ್ತದೆ. 
Airtel Prepaid: 8 ಕೋಟಿ ಗ್ರಾಹಕರ ವ್ಯಾಲಿಡಿಟಿ ವಿಸ್ತರಣೆ, 10 ರೂ. ಟಾಕ್‌ಟೈಂ

ವೊಡಾಫೋನ್ ಆಫರ್ :
ವೊಡಾಫೋನ್ ಐಡಿಯಾ ಕೊಡುಗೆ ಆಯ್ದ ನಗರಗಳಲ್ಲಿ ಲಭ್ಯವಿದ್ದು, 95 ರೂ. ಪ್ರಿಪೇಯ್ಡ್ ಪ್ಲ್ಯಾನ್ ಆಯ್ಕೆ ಮಾಡಿಕೊಂಡರೆ, ಈ ಮೊದಲು ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿ ದೊರೆಯುತ್ತಿತ್ತು. ಈಗ ವ್ಯಾಲಿಡಿಟಿ 56 ದಿನಗಳಿಗೆ ವಿಸ್ತರಣೆಯಾಗಿದೆ.

​ಜಿಯೋ ಕೊಡುಗೆ :
ದೇಶಾದ್ಯಂತ ಇರುವ ಎಲ್ಲಾ ಜಿಯೋಫೋನ್ ಬಳಕೆದಾರರಿಗೆ ಉಚಿತವಾಗಿ 100 ನಿಮಿಷಗಳ ಕರೆಗಳು ಮಾಡಬಹುದಾಗಿದ್ದು, ಇದರೊಂದಿಗೆ 100 ಎಸ್‌ಎಂಎಸ್ ಲಭ್ಯವಿದೆ. ಈ ಉಚಿತ ಕರೆ ಮಾಡುವ ನಿಮಿಷಗಳು ಮತ್ತು ಉಚಿತ SMS ಮಾಡುವ ಅವಕಾಶವನ್ನು ಏಪ್ರಿಲ್ 17ರ ವರೆಗೆ ಒದಗಿಸಲಾಗಿದೆ. ಇದಲ್ಲದೆ ಎಲ್ಲಾ ಜಿಯೋ ಫೋನ್ ಬಳಕೆದಾರರು ಮಾನ್ಯತೆಯ ಅವಧಿ ಮುಗಿದ ನಂತರವೂ ಒಳ ಬರುವ ಕರೆಗಳನ್ನು ಸ್ವೀಕರಿಸಲಿದ್ದಾರೆ.

ಬಿಎಸ್‌ಎನ್‌ಎಲ್ ವ್ಯಾಲಿಡಿಟಿ ವಿಸ್ತರಣೆ :
ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ಗ್ರಾಹಕರು ಪ್ಲ್ಯಾನ್ ಮತ್ತು ಯಾವುದೇ ಪ್ಯಾಕ್ ವ್ಯಾಲಿಡಿಟಿ ಮುಗಿದಿದ್ದರೂ, ಏ. 20ರವರೆಗೆ ಹೆಚ್ಚುವರಿ ವ್ಯಾಲಿಡಿಟಿಯನ್ನು ಒದಗಿಸಲಾಗುತ್ತದೆ. ಜತೆಗೆ ಈ ಕೊಡುಗೆ, ಮಾರ್ಚ್ 22 ಮತ್ತು ಅದರ ಬಳಿಕ ಲಾಕ್‌ಡೌನ್ ಅವಧಿಯಲ್ಲಿ ವ್ಯಾಲಿಡಿಟಿ ಮುಕ್ತಾಯವಾಗಿದ್ದರೆ ಮಾತ್ರ ಅನ್ವಯವಾಗುತ್ತದೆ. ಜತೆಗೆ ಬಿಎಸ್‌ಎನ್‌ಎಲ್ ಗ್ರಾಹಕರಿಗೆ 10 ರೂ. ವಿಶೇಷ ಟಾಕ್‌ಟೈಂ ನೆರವನ್ನು ನೀಡುತ್ತಿದೆ.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?