Top 2 ಟೆಕ್ನಾಲಜಿ News @2020 April

1. WhatsApp Video Call Limit: 8 ಮಂದಿಗೆ ಅವಕಾಶ :

ಅತ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಚಾಟ್ ಅಪ್ಲಿಕೇಶನ್ ವಾಟ್ಸಪ್, ಇನ್ನು ಮುಂದೆ ವಿಡಿಯೋ ಕಾಲ್ ಬಳಕೆದಾರರಿಗೆ ಒಮ್ಮೆಗೆ ಎಂಟು ಜನರು ಪಾಲ್ಗೊಳ್ಳುವ ಆಯ್ಕೆ ನೀಡಲಿದೆ. ಈಗ ವಾಟ್ಸಪ್‌ನಲ್ಲಿ ಒಂದು ಬಾರಿ ನಾಲ್ಕು ಮಂದಿ ಮಾತ್ರ ವಿಡಿಯೋ ಕಾಲ್‌ನಲ್ಲಿ ಪಾಲ್ಗೊಳ್ಳಬಹುದು. ಆದರೆ ಮುಂದೆ ಪರಿಷ್ಕೃತ ಅಪ್‌ಡೇಟ್ ಒದಗಿಸುವ ಮೂಲಕ ವಾಟ್ಸಪ್ ಎಂಟು ಮಂದಿ ಏಕಕಾಲಕ್ಕೆ ವಿಡಿಯೋ ಅಥವಾ ಆಡಿಯೋ ಕಾಲ್‌ನಲ್ಲಿ ಭಾಗವಹಿಸುವ ಅವಕಾಶ ನೀಡಲಿದೆ.

ವಿಡಿಯೋ ಕಾಲ್‌ಗೆ ಬೇಡಿಕೆ: ಭಾರತ ಮಾತ್ರವಲ್ಲದೆ, ಜಾಗತಿಕವಾಗಿ ವಿವಿಧ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಜಾರಿಯಾಗಿರುವುದರಿಂದ ಜನರು ಮನೆಬಿಟ್ಟು ಆಚೆ ಹೋಗುವಂತಿಲ್ಲ. ಅಲ್ಲದೆ, ವರ್ಕ್ ಫ್ರಮ್ ಹೋಮ್ ಆಯ್ಕೆಯೂ ಇರುವುದರಿಂದ, ಹೆಚ್ಚಿನ ಸಂದರ್ಭದಲ್ಲಿ ಕೆಲವೊಂದು ಮೀಟಿಂಗ್‌ಗೆ ವಿಡಿಯೋ ಕಾಲ್ ಅನಿವಾರ್ಯವಾಗಿದೆ. ಹೀಗಾಗಿ ವಿಡಿಯೋ ಕಾಲ್‌ಗೆ ಬೇಡಿಕೆ ಏರಿಕೆಯಾಗಿದೆ. ಈಗಾಗಲೇ ಝೂಮ್ ಆ್ಯಪ್‌ ಒಮ್ಮೆಗೆ 100 ಮಂದಿ ವಿಡಿಯೋ ಕಾಲ್‌ನಲ್ಲಿ ಸೇರಿಕೊಳ್ಳುವ ಅವಕಾಶ ನೀಡಿದೆ, ಹೌಸ್‌ಪಾರ್ಟಿಯೂ ಅಧಿಕ ಮಂದಿಯ ಜತೆ ವಿಡಿಯೋ ಕಾಲ್‌ಗೆ ಅವಕಾಶ ಕಲ್ಪಿಸಿದೆ. ಜತೆಗೆ ಗೂಗಲ್ ಡುವೋ, 12 ಮಂದಿ ಏಕಕಾಲಕ್ಕೆ ಕರೆಯಲ್ಲಿ ಪಾಲ್ಗೊಳ್ಳಬಹುದು.


2. Nokia Mobile: ಎಲ್ಲ ಫೋನ್‌ಗಳ ವಾರಂಟಿ 60 ದಿನ ವಿಸ್ತರಣೆ :


ಈ ಅವಧಿಯಲ್ಲಿ ನಿಮ್ಮ ಫೋನ್ ವಾರಂಟಿ ಕೊನೆಗೊಳ್ಳುತ್ತಿದೆ ಎಂದಾದರೆ, ನಿಮ್ಮ ಫೋನ್‌ಗೆ 60 ದಿನಗಳ ಹೆಚ್ಚುವರಿ ವಾರಂಟಿ ಕೊಡುಗೆ ಪ್ರಯೋಜನ ದೊರೆಯಲಿದೆ. ರಿಪೇರಿ, ರಿಟರ್ನ್ಸ್ ಸಹಿತ ಮಾರಾಟ ನಂತರದ ವಿವಿಧ ಸೇವೆಗಳಿಗೆ ಈ ಕೊಡುಗೆ ಅನ್ವಯವಾಗಲಿದೆ.

ಈಗ ನೋಕಿಯಾ ಸರದಿ : ನೋಕಿಯಾ ಎಲ್ಲ ಫೋನ್‌ಗಳ ವಾರಂಟಿ, ಮಾರ್ಚ್ 15ರಿಂದ ಆರಂಭವಾಗಿ ಮೇ. 15, 2020ರವರೆಗೆ ಇದ್ದು, ಈ ಅವಧಿಯಲ್ಲಿ ನಿಮ್ಮ ಫೋನ್ ವಾರಂಟಿ ಕೊನೆಗೊಳ್ಳುತ್ತಿದೆ ಎಂದಾದರೆ, ನಿಮ್ಮ ಫೋನ್‌ಗೆ 60 ದಿನಗಳ ಹೆಚ್ಚುವರಿ ವಾರಂಟಿ ಕೊಡುಗೆ ಪ್ರಯೋಜನ ದೊರೆಯಲಿದೆ. ರಿಪೇರಿ, ರಿಟರ್ನ್ಸ್ ಸಹಿತ ಮಾರಾಟ ನಂತರದ ವಿವಿಧ ಸೇವೆಗಳಿಗೆ ಈ ಕೊಡುಗೆ ಅನ್ವಯವಾಗಲಿದೆ.

ಗ್ರಾಹಕರು ಪರಿಶೀಲಿಸಬಹುದು : ನೋಕಿಯಾ ಫೋನ್ ಹೊಂದಿರುವ ಗ್ರಾಹಕರು, ನೋಕಿಯಾ ಸಪೋರ್ಟ್ ವೆಬ್‌ಪೇಜ್‌ಗೆ ತೆರಳಿ, ಅಲ್ಲಿ ಫೋನ್ ಐಎಂಇಐ ಕೋಡ್ ಪರಿಶೀಲಿಸುವ ಮೂಲಕ ವಾರಂಟಿ ಚೆಕ್ ಮಾಡಬಹುದು. ಆಂಡ್ರಾಯ್ಡ್ ಫೋನ್ ಬಳಕೆದಾರರು, ಸೆಟ್ಟಿಂಗ್ಸ್, ಅಬೌಟ್ ಫೋನ್, ಸ್ಟೇಟಸ್, IMEI ಇನ್‌ಫಾರ್ಮೇಶನ್ ಎಂದಿರುವಲ್ಲಿ ಫೋನ್ IMEI ಕೋಡ್ ಗಮನಿಸಬಹುದು. ಇಲ್ಲವೆ ಫೋನ್‌ನಲ್ಲಿ *#06# ನಂಬರ್ ಡಯಲ್ ಮಾಡುವ ಮೂಲಕವೂ ತಿಳಿದುಕೊಳ್ಳಬಹುದು.

ವಿವಿಧ ಬ್ರ್ಯಾಂಡ್‌ಗಳ ಕೊಡುಗೆ :ಈ ಮೊದಲು ಒನ್‌ಪ್ಲಸ್, ಹುವೈ, ಮೋಟೋರೊಲಾ, ಲೆನೊವೊ, ಸ್ಯಾಮ್‌ಸಂಗ್, ವಿವೋ ಮತ್ತು ಒಪ್ಪೋ ತನ್ನ ಫೋನ್‌ಗಳ ವಾರಂಟಿಯನ್ನು ವಿಸ್ತರಿಸಿದ್ದವು. ಮೇ 31ರವರೆಗೆ ಗ್ರಾಹಕರು ವಿಸ್ತರಿತ ವಾರಂಟಿ ಪ್ರಯೋಜನ ಪಡೆದಿದ್ದರು.






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?