ಪಾನ್‌-ಆಧಾರ್‌ ಜೋಡಣೆ ಗಡುವು ಮತ್ತೆ ವಿಸ್ತರಣೆ; ಮಾರ್ಚ್‌ 2020ರವರೆಗೆ ಅವಕಾಶ

ಪಾನ್‌ ಕಾರ್ಡ್‌, ಆಧಾರ್ ಕಾರ್ಡ್‌ ಸಂಖ್ಯೆ ಜೋಡಣೆಗೆ ಈಗ ಕೇಂದ್ರ ಸರಕಾರ ಮತ್ತೆ 

ಕಾಲಮಿತಿಯನ್ನು ವಿಸ್ತರಿಸಿದೆ. ಮುಂದಿನ ವರ್ಷದ ಮಾರ್ಚ್‌ವರೆಗೆ ಗಡುವು 

ನೀಡಲಾಗಿದೆ.


ಹೊಸದಿಲ್ಲಿ: ಆಧಾರ್ ಮತ್ತು ಪಾನ್‌ಕಾರ್ಡ್ ಸಂಖ್ಯೆ ಜೋಡಣೆಗೆ ಕಾಲಮಿತಿಯನ್ನು ಕೇಂದ್ರ ಸರಕಾರ 2020ರ ಮಾರ್ಚ್‌ವರೆಗೆ ವಿಸ್ತರಿಸಿದೆ.

ಈಗಾಗಲೇ ಲಿಂಕ್‌ ಆಗಿದೆಯೇ ಎಂದು ತಿಳಿಯುವುದು ಹೇಗೆ?

ನಿಮ್ಮ ಪ್ಯಾನ್‌ ಮತ್ತು ಆಧಾರ್‌ ಈಗಾಗಲೇ ಲಿಂಕ್‌ ಆಗಿವೆಯೇ? ಇಲ್ಲವೇ ಎಂಬ ಬಗ್ಗೆ ಅನುಮಾನ ನಿಮ್ಮಲ್ಲಿರಬಹುದು. ಈ ಬಗ್ಗೆ ದೃಢೀಕರಿಸಿಕೊಳ್ಳಲು ಹೀಗೆ ಮಾಡಿ...

1. ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.incometaxindiaefiling.gov.in/


2. ವೆಬ್‌ಸೈಟ್‌ನ ಹೋಮ್‌ಪೇಜ್‌ನ ಎಡಭಾಗದಲ್ಲಿರುವ Link Aadhaar ಎನ್ನುವುದನ್ನು ಕ್ಲಿಕ್‌ ಮಾಡಿ. ಆ ಪುಟದಲ್ಲಿ 'ನೀವು ಈಗಾಗಲೇ ಲಿಂಕ್‌ ಮಾಡಿದ್ದರೆ, ಅದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ' ಎನ್ನುವರ್ಥದ ಸಂದೇಶ ಕಾಣಿಸುತ್ತದೆ. ಅಲ್ಲಿರುವ Link Aadhaar ಅನ್ನುವುದನ್ನು ಕ್ಲಿಕ್‌ ಮಾಡಿ.

3. ನಿಮ್ಮ ಪ್ಯಾನ್‌ ಮತ್ತು ಆಧಾರ್‌ ಸಂಖ್ಯೆಯನ್ನು ಅಲ್ಲಿ ಕೊಟ್ಟಿರುವ ಖಾಲಿ ಬಾಕ್ಸ್‌ಗಳಲ್ಲಿ ಭರ್ತಿ ಮಾಡಿ. View Link Aadhaar Status ಅನ್ನುವುದನ್ನು ಕ್ಲಿಕ್‌ ಮಾಡಿ. ಆಗ ನಿಮ್ಮ ಕಾರ್ಡ್‌ ಲಿಂಕ್‌ ಆಗಿದೆಯೇ ಅಥವಾ ಇಲ್ಲವೇ ಎನ್ನುವ ಸಂದೇಶವು ತೆರೆ ಮೇಲೆ ಕಾಣಿಸುತ್ತದೆ.



ಪಾನ್‌ ಕಾರ್ಡ್‌, ಆಧಾರ್ ಕಾರ್ಡ್‌ ಸಂಖ್ಯೆ ಜೋಡಣೆಗೆ ಈಗ 

ಕೇಂದ್ರ ಸರಕಾರ ಮತ್ತೆ ಕಾಲಮಿತಿಯನ್ನು ವಿಸ್ತರಿಸಿದೆ. 

ಮುಂದಿನ ವರ್ಷದ ಮಾರ್ಚ್‌ವರೆಗೆ ಗಡುವು ನೀಡಲಾಗಿದೆ.


ಈ ಮುನ್ನ ನೀಡಿದ ಸೂಚನೆ ಅನುಸಾರ ಜೋಡಣೆಗೆ ಡಿಸೆಂಬರ್‌ 31 ಕೊನೆಯ ದಿನವಾಗಿತ್ತು. ಇದರಿಂದ ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ಜೋಡಿಸಲು ಹೆಚ್ಚಿನ ಸಮಯ ದೊರೆಯಲಿದ್ದು, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಇದೀಗ 6ನೆಯ ಬಾರಿಗೆ ಈ ಕಾಲಾವಧಿಯನ್ನು ವಿಸ್ತರಿಸುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಮಹತ್ವದ ಆಧಾರ್ ಯೋಜನೆಗೆ ಸಾಂವಿಧಾನಿಕ ಮಾನ್ಯತೆ ನೀಡಿತ್ತು.

ವೈಯಕ್ತಿಕ ಬೆರಳಚ್ಚು ಗುರುತನ್ನು ಪ್ಯಾನ್ ಸಂಖ್ಯೆ ಪಡೆಯಲು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇದನ್ನು ಕಡ್ಡಾಯಗೊಳಿಸಿತ್ತು.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?