ಪೋಸ್ಟ್‌ಗಳು

ಜೂನ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?

ಇಮೇಜ್
ವಾಟ್ಸಪ್ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ಮಾರ್ಟ್‌ಫೋನ್ ಮತ್ತು ಇಂಟರ್‌ನೆಟ್ ಬಳಸುತ್ತಾರೆ ಎಂದಾದರೆ ಅವರು ಖಂಡಿತವಾಗಿಯೂ ವಾಟ್ಸಪ್ ಬಳಸುತ್ತಾರೆ. ಹೀಗಿರುವಾಗ ವಾಟ್ಸಪ್ ಕಾಲಕಾಲಕ್ಕೆ ಬಳಕೆದಾರರ ಅನುಕೂಲಕ್ಕಾಗಿ ವಿವಿಧ ಆಯ್ಕೆಗಳನ್ನು ಮತ್ತು ಅಪ್‌ಡೇಟ್‌ಗಳನ್ನು ಜನರಿಗೆ ನೀಡುತ್ತದೆ . ಅದಕ್ಕೂ ಮುಂಚೆ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಬೀಟಾ ಆವೃತ್ತಿ ಮೂಲಕ ಹೊಸ ಅಪ್‌ಡೇಟ್ ನೀಡಿ, ಅದನ್ನು ಪರಿಶೀಲನೆಗೆ ಒಳಪಡಿಸುತ್ತದೆ . ಈ ಬಾರಿ ಹಂತಹಂತವಾಗಿ ವಾಟ್ಸಪ್ ನೀಡಲು ಉದ್ದೇಶಿಸಿರುವ ಅಪ್‌ಡೇಟ್‌ಗಳ ವಿವರ ಇಲ್ಲಿದೆ .  ಕಾಂಟಾಕ್ಟ್ ಶಾರ್ಟ್‌ಕಟ್ : ಐಓಎಸ್ ವಾಟ್ಸಪ್ ಬೀಟಾ ಆವೃತ್ತಿ 2.20.70.18 ಮತ್ತು 2.20.70.19 ಇದರಲ್ಲಿ ಹೇಳಿರುವಂತೆ, ಇತರ ಆ್ಯಪ್‌ಗಳ ಮೂಲಕ ಲಿಂಕ್ ಕಳುಹಿಸಿದರೆ, ಅವರ ವಾಟ್ಸಪ್ ಕಾಂಟಾಕ್ಟ್ ಅನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಜತೆಗೆ ಶೇರ್ ಶೀಟ್‌ನಲ್ಲಿ ಫೋಟೋ ಮತ್ತಿತರ ವಿವರ ಕೂಡ ಅಪ್‌ಡೇಟ್ ಆಗುತ್ತಿರುತ್ತದೆ. ಮೆನು ಮರುವಿನ್ಯಾಸ : ಐಓಎಸ್ 13ರಲ್ಲಿ ಈಗ ಯಾವುದೇ ವಾಟ್ಸಪ್ ಮೆಸೇಜ್ ಅನ್ನು ಒತ್ತಿ ಹಿಡಿದಾಗ ಸ್ಟಾರ್, ರಿಪ್ಲೈ, ಕಾಪಿ, ಫಾರ್‌ವರ್ಡ್ ಮತ್ತು ಇನ್ಫೋ ಹಾಗೂ ಡಿಲೀಟ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದೇ ರೀತಿಯನ್ನು ಐಓಎಸ್ 12ರ ಆವೃತ್ತಿಯಲ್ಲೂ ವಾಟ್ಸಪ್ ಪರಿಚಯಿಸುತ್ತಿದೆ.  ಸರ್ಚ್ ಬೈ ಡೇಟ್ : ನಿಗದಿತ ದಿನಾಂಕವನ್ನು ನೀಡಿ, ಅದರ ಮೂಲಕ ಸರ್ಚ್ ...

Vivo Phone : ಒಂದೇ IMEI ಬಳಸಿ, 13,500ಕ್ಕೂ ಫೋನ್ ತಯಾರಿಸಿ ಗಂಭೀರ ಸ್ವರೂಪದ ಭದ್ರತಾ ಲೋಪ

ಇಮೇಜ್
ಒಂದೇ IMEI ಬಳಸಿ, 13,500ಕ್ಕೂ ಫೋನ್ ತಯಾರಿಸಿ ಗಂಭೀರ ಸ್ವರೂಪದ ಭದ್ರತಾ ಲೋಪ  ಎಸಗಿರುವ ಚೀನಾ ಮೂಲದ ವಿವೋ ಕಂಪನಿ ವಿರುದ್ಧ  ಮೀರತ್ ಸೈಬರ್ ಪೊಲೀಸರು ಸೂಕ್ತ ಪ್ರಕರಣ ದಾಖಲಿಸಿ ತನಿಖೆ ನಡೆಸಲಿದ್ದಾರೆ . ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಫೋನ್‌ಗಳನ್ನು ಮಾರಾಟ ಮಾಡಿರುವ ಚೀನಾ ಮೂಲದ ವಿವೋ ಕಂಪನಿಯ ವಿರುದ್ಧ ಮೀರತ್ ಸೈಬರ್‌ಕ್ರೈಂ ಪೊಲೀಸರು ನಡೆಸಿದ ತನಿಖೆಯಲ್ಲಿ ಅಘಾತಕಾರಿ ಸಂಗತಿಯೊಂದು ಬಯಲಾಗಿದೆ. ಒಂದಲ್ಲ, ಎರಡಲ್ಲಾ, ಬರೋಬ್ಬರಿ 13,500ಕ್ಕೂ ಅಧಿಕ ಸ್ಮಾರ್ಟ್‌ಫೋನ್‌ಗಳನ್ನು ವಿವೋ ಒಂದೇ IMEI ಸಂಖ್ಯೆ ಬಳಸಿ ಉತ್ಪಾದಿಸಿದೆ ಎನ್ನಲಾಗಿದೆ .! IMEI ಸಂಖ್ಯೆ ಎನ್ನುವುದು ಇಂಟರ್‌ನ್ಯಾಶನಲ್ ಮೊಬೈಲ್ ಇಕ್ವಿಪ್‌ಮೆಂಟ್ ಐಟೆಂಟಿಟಿ ನಂಬರ್ ಆಗಿದೆ.   15 ಅಂಕಿಗಳ ವಿಶಿಷ್ಟ ಕೋಡ್ ನಂಬರ್ ಇದಾಗಿದ್ದು, ಒಂದು ಫೋನ್‌ಗೆ ಒಂದೇ IMEI ಎನ್ನುವ ನಿಯಮವಿದೆ. ಡ್ಯುಯಲ್ ಸಿಮ್ ಆಗಿದ್ದರೂ, ಎರಡು IMEI ಸಂಖ್ಯೆಯನ್ನು ಒಂದೇ ಫೋನ್ ಹೊಂದಿರುತ್ತದೆ.  ಆದರೆ ವಿವೋ ಮಾತ್ರ ಒಂದೇ IMEI ಸಂಖ್ಯೆ ಬಳಸಿಕೊಂಡು ಇ‍ಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮೊಬೈಲ್ ಫೋನ್ ತಯಾರಿಸಿರುವುದು ಆತಂಕಕ್ಕೆ ಕಾರಣವಾಗಿದೆ.   ( ಹೀಗಾಗಿ ಮೀರತ್ ಪೊಲೀಸರು ಚೀನಾ ಮೂಲದ ವಿವೋ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ .) 5 ತಿಂಗಳಿನಿಂದ ತನಿಖೆ! ಮೀರತ್ ಸೈಬರ್‌ಕ್ರೈಂ ಪೊಲೀಸರು ಕಳೆದ 5 ತಿಂಗಳಿನಿಂದ ಸತತ ತನಿಖೆ ನಡೆಸಿ, ಈ ವಂಚನೆಯನ್ನು ಪತ್ತೆಹಚ್ಚಿ...

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

ಇಮೇಜ್
ಕೆಲವೊಂದು ಚಾನಲ್‌ಗಳಲ್ಲಿನ ಪ್ರಸಾರ ಚೆನ್ನಾಗಿಲ್ಲ ಎಂದು ಕೂಡ ಗ್ರಾಹಕರು ಹೇಳಿದ್ದರಿಂದ,   ಜೂನ್ 15ರ ಬಳಿಕ ಟಾಟಾ ಸ್ಕೈ ಕೆಲವೊಂದು ಚಾನಲ್‌ಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ.  ಈ ಮೂಲಕ ಪ್ಯಾಕ್‌ ದರದಲ್ಲಿ ಇಳಿಕೆ ಮಾಡಲು ಟಾಟಾ ಸ್ಕೈ ಚಿಂತನೆ ನಡಿಸಿದೆ . ಲಾಕ್‌ಡೌನ್ ಜಾರಿಯಾದ ಬಳಿಕ ದೇಶದಲ್ಲಿ ವಿಡಿಯೋ ಮತ್ತು ಆನ್‌ಲೈನ್ ಸ್ಟ್ರೀಮಿಂಗ್ ಸೇವೆಗಳ ವೀಕ್ಷಣೆಯಲ್ಲಿ ಹೆಚ್ಚಳವಾಗಿದೆ.  ಆದರೆ ಟಿವಿ ವೀಕ್ಷಣೆಯ ಮೇಲೆ ಪರಿಣಾಮ ಬೀರಿದ್ದು, ಧಾರವಾಹಿಗಳ ಶೂಟಿಂಗ್ ನಡೆಯದ ಕಾರಣ ಪ್ರಸಾರ ನಿಂತುಹೋಗಿದೆ. ಹೀಗಾಗಿ ಟಿವಿ ಚಾನಲ್‌ಗಳಲ್ಲಿ ಧಾರವಾಹಿ ಮರುಪ್ರಸಾರವಾಗುತ್ತಿದೆ.   ಆದರೆ ಇದೇ ಸಂದರ್ಭದಲ್ಲಿ ಬಹುತೇಕರು ಡಿಟಿಎಚ್ ಸೇವೆಗಳಲ್ಲಿ ಚಾನಲ್ ಕಡಿತಕ್ಕೆ ನಿರ್ಧರಿಸಿದ್ದಾರೆ.  ಲಾಕ್‌ಡೌನ್ ಅವಧಿಯಲ್ಲಿ ಟಾಟಾ ಸ್ಕೈನ ಬಹುತೇಕ ಚಂದಾದಾರರು ವೆಚ್ಚ ಕಡಿತಕ್ಕೆ ಮುಂದಾಗಿದ್ದು, ಚಾನಲ್ ಪ್ಯಾಕ್‌ನಲ್ಲಿ ಕಡಿತ ಮಾಡಿದ್ದಾರೆ.  ಕೆಲವೊಂದು ಚಾನಲ್‌ಗಳಲ್ಲಿನ ಪ್ರಸಾರ ಚೆನ್ನಾಗಿಲ್ಲ ಎಂದು ಕೂಡ ಗ್ರಾಹಕರು ಹೇಳಿದ್ದರಿಂದ, ಜೂನ್ 15 ರ ಬಳಿಕ  ಟಾಟಾ ಸ್ಕೈ ಕೆಲವೊಂದು ಚಾನಲ್‌ಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ.  ಈ ಮೂಲಕ ಪ್ಯಾಕ್‌ ದರದಲ್ಲಿ ಇಳಿಕೆ ಮಾಡಲು ಟಾಟಾ ಸ್ಕೈ ಚಿಂತನೆ ನಡಿಸಿದೆ. ಮೂಲಗಳ ಪ್ರಕಾರ ಅಂದಾಜು 70 ಲಕ್ಷಕ್ಕೂ ಅಧಿಕ ಚಂದಾದಾರರಿಗೆ ಚಾನಲ್‌ ವೆಚ್ಚ ಕಡಿತದ ಪ್ರಯೋಜನ ದೊರೆಯಲಿದೆ.  ತಿಂಗ...