ಕಿಚ್ಚ ಸುದೀಪ್​ ಅಭಿನಯದ ಪೈಲ್ವಾನ್​ ಸಿನಿಮಾ ಪೈರಸಿ ಮಾಡಿದ್ದ ಆರೋಪಿಯ ಬಂಧನ







ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ಅಭಿನಯದ ಬಹುನೀರಿಕ್ಷಿತಪೈಲ್ವಾನ್”​ ಚಿತ್ರವನ್ನು ಪೈರಸಿ ಮಾಡಿದ ಆರೋಪದಲ್ಲಿ ಯುವಕನೊಬ್ಬನನ್ನು ಶುಕ್ರವಾರ ಬಂಧಿಸಲಾಗಿದೆ.
ರಾಕೇಶ್ ಬಂಧಿತ ಆರೋಪಿ. ಸಿಸಿಬಿ ಪೊಲೀಸರಿಂದ ಬಂಧನಗೊಂಡಿರುವ ರಾಕೇಶ್ ನೆಲಮಂಗಲದ ಇಮಚೇನಹಳ್ಳಿ ನಿವಾಸಿ. ಪೈಲ್ವಾನ್ ಚಿತ್ರ ಬಿಡುಗಡೆಯಾದ ದಿನವೇ ಸಂಪೂರ್ಣ ಸಿನಿಮಾ ವೀಕ್ಷಿಸಬಹುದಾದ ಲಿಂಕ್ ಅನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿ ವೈರಲ್ ಮಾಡಿದ ಆರೋಪ ಕೇಳಿಬಂದಿದೆ.
ಲಿಂಕ್ ಶೇರ್ ಮಾಡಿದ್ದಲ್ಲದೆ ತನ್ನ ಫೇಸ್ಬುಕ್ ಸ್ಟೋರಿಯಲ್ಲಿ ಪೈಲ್ವಾನ್ ಸಿನಿಮಾದ ಲಿಂಕ್ ಬೇಕಾದವರು ತನಗೆ ಇನ್ಬಾಕ್ಸ್ ಮಾಡುವಂತೆ ಪೋಸ್ಟ್ ಮಾಡಿದ್ದ. ಈತನ ಮೂಲಕ ಆತನ ಇಬ್ಬರು ಫೇಸ್ಬುಕ್ ಸ್ನೇಹಿತರು ಪೈಲ್ವಾನ್ ಚಿತ್ರದ ಲಿಂಕ್ ಶೇರ್ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಇತ್ತೀಚೆಗಷ್ಟೇ ಪೈಲ್ವಾನ್ ಚಿತ್ರದ ನಿರ್ಮಾಪಕಿ‌ ಸ್ವಪ್ನ ಕೃಷ್ಣ ಪೊಲೀಸರಿಗೆ ದೂರು ನೀಡಿದ್ದರು. ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತ ಆರೋಪಿ ದರ್ಶನ್ ಅಭಿಮಾನಿ
ಆರೋಪಿ ರಾಕೇಶ್ ದರ್ಶನ್ ಅಭಿಮಾನಿಯಾಗಿದ್ದು, ತನ್ನ ಫೇಸ್ಬುಕ್ ಖಾತೆಯಲ್ಲಿ ಸಾಕಷ್ಟು ದರ್ಶನ್ ಫೋಟೊಗಳನ್ನು ಪೋಸ್ಟ್ ಮಾಡಿಕೊಂಡಿದ್ದಾನೆ. ಅಲ್ಲದೆ, ತನ್ನ ಪ್ರೊಫೈಲ್ನಲ್ಲಿ ದರ್ಶನ್ ಅಭಿಮಾನಿಯಂತಲೂ ಬರೆದುಕೊಂಡಿದ್ದಾನೆ.
......................





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?