ರಾಜಮಾತೆ ಜೊತೆ ಸಿಎಂ ಮಾತುಕತೆ: ಜಂಬೂ ಸವಾರಿ ಪುಷ್ಪಾರ್ಚನೆಗೆ ಯದುವೀರ್‌ಗೆ ಆಹ್ವಾನ

ಮೈಸೂರು ದಸರಾಗೆ ಇಂದು ವಿದ್ಯುಕ್ತವಾಗಿ ಚಾಲನೆ ಸಿಕ್ಕಿದೆ. ದಸರಾ ಹಿನ್ನೆಲೆಯಲ್ಲಿ, 

ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ 


ಸಿಎಂ ಯಡಿಯೂರಪ್ಪ ಔಪಚಾರಿಕ ಮಾತುಕತೆ ನಡೆಸಿದ್ದಾರೆ. ದಸರಾ 


ಮಹೋತ್ಸವಕ್ಕೆ ರಾಜ ಕುಟುಂಬದ ಕೊಡುಗೆಯನ್ನು ಸ್ಮರಿಸಿದರು.




ಮೈಸೂರು: ಮೈಸೂರು ದಸರಾ 2019 ಮಹೋತ್ಸವ ಹಿನ್ನೆಲೆಯಲ್ಲಿ ರಾಜಮಾತೆ ಪ್ರಮೋದಾದೇವಿ‌ ಒಡೆಯರ್ ಅವರನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅರಮನೆಯಲ್ಲಿ ಭೇಟಿ ಮಾಡಿ ಔಪಾಚಾರಿಕವಾಗಿ ಮಾತುಕತೆ ನಡೆಸಿದರು. ಭೇಟಿ ಬಳಿಕ ಮಾತನಾಡಿದ ಯಡಿಯೂರಪ್ಪ, ದಸರಾ ಮಹೋತ್ಸವದಲ್ಲಿ ರಾಜಮನೆತನದ ಕೊಡುಗೆ ಅಪಾರವಾಗಿದ್ದು, ರಾಜಮಾತೆ ಪ್ರಮೋದಾದೇವಿ ಅವರ ಜೊತೆ ಸಾಕಷ್ಟು ವಿಚಾರಗಳನ್ನು ಮಾತನಾಡಿದೆ ಎಂದರು.
ಜಂಬೂಸವಾರಿ ದಿವಸ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ "ದುವೀರ್ ಒಡೆಯರ್" ಅವರನ್ನು‌ ಕಳುಹಿಸಬೇಕು ಎಂದು ರಾಜಮಾತೆಯವರಲ್ಲಿ‌ ಕೋರಿರುವುದಾಗಿ ಯಡಿಯೂರಪ್ಪ ತಿಳಿಸಿದರು. ಈ ಬಾರಿ ದಸರಾ ಮಹೋತ್ಸವ ತುಂಬಾ ಉತ್ತಮ ರೀತಿಯಲ್ಲಿ ಮೂಡಿಬಂದಿದ್ದು, ಫಲಪುಷ್ಪ ಪ್ರದರ್ಶನ ಹಾಗೂ ದೀಪಾಲಂಕಾರ ಪ್ರವಾಸಿಗರನ್ನು ಆಕರ್ಷಿಸುವಲ್ಲಿ‌ ಯಶಸ್ವಿಯಾಗುತ್ತವೆ. ಅದೇ ರೀತಿ ‌ಇಲ್ಲಿನ ಸಚಿವರು, ಶಾಸಕರು ಅಧಿಕಾರಿಗಳ ಜೊತೆ ಉತ್ತಮ‌ ಬಾಂಧವ್ಯದಿಂದ ಕೆಲಸ ಮಾಡಿರುವುದು ಕಂಡು ಬರುತ್ತದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಹದೇಶ್ವರ ಬೆಟ್ಟದ ವತಿಯಿಂದ ಅರಮನೆ ಮುಂಭಾಗದಲ್ಲಿ ದಸರಾ ಮಾಹಿತಿ ಕೇಂದ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ವಿ ಸೋಮಣ್ಣ, ಸಿ.ಟಿ ರವಿ, ಎಲ್‌.ನಾಗೇಂದ್ರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?