ವಿಶ್ವಸಂಸ್ಥೆಯ ಹೊರ ಆವರಣದಲ್ಲಿ ಮೊಳಗಿದ , ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂಬ ಘೋಷಣೆ @NAMO NAMO NAMO


ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಕಟ್ಟಡದ ಹೊರಭಾಗದಲ್ಲಿ ಜಮಾಯಿಸಿದ್ದ ಭಾರತೀಯ ಮೂಲದವರು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು.
ಅಂದಾಜು 2,500ಕ್ಕೂ ಹೆಚ್ಚು ಜನರು ಅದರಲ್ಲೂ ವಿಶೇಷವಾಗಿ ಕಾಶ್ಮೀರಿ ಪಂಡಿತರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಸೇರಿದ್ದರು. ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂಬ ಘೋಷಣೆಯನ್ನು ಕೂಗಿದ್ದಲ್ಲದೆ, ವಂದೇ ಮಾತರಂ ಹಾಡನ್ನು ಹಾಡಿದರು.
ಪ್ರಧಾನಿ ಮೋದಿ ಅವರ ತದ್ರೂಪಿಯಂತೆ ವೇಷ ಧರಿಸಿ ಬಂದಿದ್ದ ವ್ಯಕ್ತಿಯೊಬ್ಬರ ಸುತ್ತ ನೆರೆದಿದ್ದ ಜನರು ಭಾರತದ ಪರ ಘೋಷಣೆ ಕೂಗಿದರು. ಶಂಖಾನಾದ ಮಾಡಿ ಸಂಭ್ರಮಿಸಿದರು. ಅಂದಾಜು 3 ದಶಕಕ್ಕೂ ಹೆಚ್ಚುಕಾಲದ ಬಳಿಕ ತಮ್ಮ ಮೂಲಸ್ಥಾನ ಕಾಶ್ಮೀರದಲ್ಲಿ ನೆಲೆಸಲು ಅವಕಾಶ ಸಿಕ್ಕಿದ್ದಕ್ಕಾಗಿ ಸಂತಸ ಪಟ್ಟರು.
ಇದಕ್ಕೂ ಮುನ್ನ ಪಾಕಿಸ್ತಾನದ ಬಲೂಚಿಸ್ತಾನ, ಬಾಲ್ಟಿಸ್ತಾನ ಸೇರಿ ಪಾಕಿಸ್ತಾನದ ವಿವಿಧೆಡೆಗಳಲ್ಲಿ ಪಾಕಿಸ್ತಾನದ ಸೇನಾಪಡೆ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದೌರ್ಜನ್ಯ, ಆಗುತ್ತಿರುವ ಮಾನವಹಕ್ಕು ಉಲ್ಲಂಘನೆಗಳ ಕುರಿತು ವಿಶ್ವದ ಗಮನ ಸೆಳೆಯಲು ಸಹಕರಿಸುವಂತೆ ಆ ಭಾಗದ ಜನರು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿಕೊಂಡರು. ಜತೆಗೆ ವಿಮಾನದ ಬಾಲಕ್ಕೆ ವಿಶ್ವ ಸಮುದಾಯದ ಸಹಾಯಯಾಚಿಸುವ ಬಲೂಚಿಸ್ತಾನದ ಸಂದೇಶವನ್ನು ಪ್ರದರ್ಶಿಸಲಾಯಿತು. ಹಲವು ವಾಹನಗಳ ಮೇಲೆ ಕೂಡ ಇದೇ ಅರ್ಥದ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟಿಸಲಾಯಿತು.


…………………………………………………………………….......

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?