ಮೋದಿ vs ಇಮ್ರಾನ್ ಖಾನ್: ವಿಶ್ವಸಂಸ್ಥೆಯಲ್ಲಿ ಇಂದು ಉಭಯ ನಾಯಕರ ಭಾಷಣ
ಪ್ರತಿವರ್ಷ ನಡೆಯುವ ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಜಾಗತಿಕ ವಿದ್ಯಮಾನ, ಪ್ರಮುಖ ಘಟನೆ, ಅಂತಾರಾಷ್ಟ್ರೀಯ ವಿವಾದ ಕುರಿತು ಚರ್ಚೆ ನಡೆಸಲಾಗುತ್ತದೆ. ಸದಸ್ಯ ರಾಷ್ಟ್ರಗಳ ನಾಯಕರು ಸಭೆ ಉದ್ದೇಶಿಸಿ ಮಾತನಾಡುತ್ತಾರೆ. ಪ್ರಸ್ತುತ ಮಹಾಧಿವೇಶನದಲ್ಲಿ ಸೆ. 24ರಿಂದ ವಿವಿಧ ದೇಶಗಳ ನಾಯಕರ ಭಾಷಣ ಆರಂಭವಾಗಿದೆ. ಸೆ. 30ರವರೆಗೂ ಭಾಷಣ ಮುಂದುವರಿಯಲಿದೆ.
ನ್ಯೂಯಾರ್ಕ್: ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಸಂಜೆ ಮುಖಾಮುಖಿಯಾಗುವ ಸಾಧ್ಯತೆ ಇದೆ. ಭಾರತೀಯ ಕಾಲಮಾನ ರಾತ್ರಿ ಸುಮಾರು 9 ಗಂಟೆಗೆ ಮೋದಿ ಭಾಷಣ ಮಾಡಲಿದ್ದಾರೆ. ಇದಾದ ಬಳಿಕ ಇಮ್ರಾನ್ ಖಾನ್ ಮಾತನಾಡಲಿದ್ದಾರೆ.
ಜಮ್ಮು-ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವೆ ಬಿಕ್ಕಟ್ಟು ಉಂಟಾಗಿರುವುದರಿಂದ ಮೋದಿ ಭಾಷಣದಲ್ಲಿ ಉಗ್ರವಾದ ನಿಗ್ರಹಕ್ಕೆ ಒತ್ತು ನೀಡಬಹುದು ಎನ್ನಲಾಗಿದೆ. ಹವಾಮಾನ ಬದಲಾವಣೆ ವಿಚಾರವಾಗಿಯೂ ಭಾರತದ ನಿಲುವನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸುವ ನಿರೀಕ್ಷೆಯಿದೆ. ಕಾಶ್ಮೀರ ವಿಚಾರವನ್ನು ಇಮ್ರಾನ್ ಖಾನ್ ಮತ್ತೆ ಪ್ರಸ್ತಾಪ ಮಾಡುವುದು ಬಹುತೇಕ ಖಚಿತವಾಗಿದೆ. ಮೋದಿ ಯಾವ ರೀತಿ ಇದನ್ನು ನಿಭಾಯಿಸಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. 2014ರಲ್ಲಿ ಮಹಾಧಿವೇಶನದಲ್ಲಿ ಮಾತನಾಡಿದ್ದ ಮೋದಿ, ಯೋಗ ದಿನ ಆಚರಣೆಯ ಪರಿಕಲ್ಪನೆ ಉಲ್ಲೇಖಿಸಿದ್ದರು. ನಂತರ ಜೂ. 21ನ್ನು ವಿಶ್ವ ಯೋಗದಿನವೆಂದು ಘೋಷಣೆ ಮಾಡಲಾಗಿತ್ತು.
ಪಾಕ್ ಕಾಶ್ಮೀರ ಮಂತ್ರ: ಪ್ರಧಾನಿ ಮೋದಿ ಬಳಿಕ ಭಾಷಣ ಮಾಡಲಿರುವ ಇಮ್ರಾನ್ ಖಾನ್, ಕಾಶ್ಮೀರ ವಿಚಾರವನ್ನು ಮತ್ತೆ ಪ್ರಸ್ತಾಪಿಸಲಿದ್ದಾರೆ. ಈ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವ ಯತ್ನ ಮಾಡಲಿದ್ದಾರೆ. ಆದರೆ ಇದು ಫಲನೀಡುವ ಸಾಧ್ಯತೆ ತೀರಾ ಕಡಿಮೆ. ಈಗಾಗಲೇ ಇಮ್ರಾನ್ ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಸೋತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಮೋದಿ ಸೌದಿ ಭೇಟಿ ಸಾಧ್ಯತೆ
ವಿಶ್ವಸಂಸ್ಥೆ ಮಹಾಧಿವೇಶ ನದಿಂದ ಮರಳುವ ವೇಳೆ ಮೋದಿ ರಿಯಾದ್ಗೂ ತೆರಳಲಿದ್ದಾರೆ ಎನ್ನಲಾಗಿದೆ. ತೈಲ ಸರಬರಾಜು ಮತ್ತು ಒಪ್ಪಂದಗಳ ಬಗ್ಗೆ ಸೌದಿ ಆಡಳಿತ ಜತೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಇದರಿಂದ ಭಾರತಕ್ಕೆ ತೈಲ ಪೂರೈಕೆಯಲ್ಲಿ ಸಮಸ್ಯೆ ಎದುರಾಗುವುದಿಲ್ಲ.
ಮಹಾಧಿವೇಶನ ಸುತ್ತಮುತ್ತ…
ಯುಎನ್ಜಿಎ ಅಂಗಸಂಸ್ಥೆಗಳು
ಯುಎನ್ಜಿಎಗೆ ಪ್ರಮುಖವಾಗಿ ಐದು ಅಂಗಸಂಸ್ಥೆಗಳಿವೆ. ಸಮಿತಿ, ಆಯೋಗ, ಮಂಡಳಿ, ಬೋರ್ಡ್ ಮತ್ತು ಪ್ಯಾನೆಲ್ಗಳೆಂದು ವಿಂಗಡಿಸಲಾಗಿದೆ.
ಮುಖ್ಯ ಸಮಿತಿಗಳು:
- ನಿಶಸ್ತ್ರಿಕರಣ ಮತ್ತು ಅಂತಾರಾಷ್ಟ್ರೀಯ ಭದ್ರತೆ
- ಹಣಕಾಸು ಮತ್ತು ಆರ್ಥಿಕತೆ
- ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನವೀಯ
- ರಾಜಕೀಯ ಮತ್ತು ಡಿಕೊಲೊನೈಸೇಷನ್
- ಆಡಳಿತ, ಬಜೆಟರಿ ಮತ್ತು ಸಾಮಾನ್ಯ
- ಕಾನೂನು
ಸೆ.17ರಿಂದ 30ರವರೆಗೆ
ಸ್ಥಳ: ಅಮೆರಿಕದ ನ್ಯೂಯಾರ್ಕ್ ಸಿಟಿ
ಸದಸ್ಯತ್ವ: ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿರುವ ಎಲ್ಲ 193 ರಾಷ್ಟ್ರಗಳ ನಾಯಕರು ಮಹಾಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಆಯೋಗಗಳು
- ವಿಶ್ವಸಂಸ್ಥೆ ನಿಶಸ್ತ್ರಿಕರಣ ಆಯೋಗ
- ಅಂತಾರಾಷ್ಟ್ರೀಯ ನಾಗರಿಕ ಸೇವೆ ಆಯೋಗ
- ಅಂತಾರಾಷ್ಟ್ರೀಯ ಕಾನೂನು ಆಯೋಗ
- ಅಂತಾರಾಷ್ಟ್ರೀಯ ವ್ಯಾಪಾರ ಕಾನೂನು ಆಯೋಗ
- ವಿಶ್ವಸಂಸ್ಥೆ ಶಾಂತಿ ಕಾಪಾಡುವ ಆಯೋಗ
- ವಿಶ್ವಸಂಸ್ಥೆ ಸಂಧಾನ ಆಯೋಗ
ಬಜೆಟ್ಗೆ ಅನುಮೋದನೆ
ಮಹಾಧಿವೇಶನದಲ್ಲಿ ವಿಶ್ವಸಂಸ್ಥೆಯ ಬಜೆಟ್ಗೆ ಅನುಮೋದನೆ ನೀಡ ಲಾಗುತ್ತದೆ. ಸದಸ್ಯ ರಾಷ್ಟ್ರಗಳು ಎಷ್ಟು ಮೊತ್ತವನ್ನು ನೀಡುತ್ತವೆ ಎನ್ನುವ ಬಗ್ಗೆ ನಿರ್ಧರಿಸಲಾಗುತ್ತದೆ.
ಚರ್ಚೆ ವಿಷಯಗಳು
- ವಾಮಾನ ಬದಲಾವಣೆ
- ಅಮೆರಿಕ- ಚೀನಾ ವ್ಯಾಪಾರ ಬಿಕ್ಕಟ್ಟು
- ಬ್ರೆಕ್ಸಿಟ್ ್ಞಮೆರಿಕ- ಇರಾನ್ ವೈಮನಸ್ಯ
ಆಸನ ವ್ಯವಸ್ಥೆ ಹೇಗಿರುತ್ತದೆ
ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ದೇಶಗಳ ಹೆಸರಿನ ಇಂಗ್ಲಿಷ್ ವರ್ಣಮಾಲೆಯ ಮೊದಲಕ್ಷರಗಳನ್ನು ಆಧರಿಸಿ ಸೀಟಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ. ಮೊದಲ ಸಾಲಿನ ಎಡ ಬದಿಯಲ್ಲಿ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಸೀನರಾಗುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ