ಪೈಲ್ವಾನ್ ಪೈರಸಿ ಪ್ರಕರಣ: ಕೈಗೆ ಬಳೆ ತೊಟ್ಟಿಲ್ಲ, ಖಡಗ ಎಂದ ಸುದೀಪ್‌ಗೆ ತರಾಟೆಯ ಸುರಿಮಳೆ, ಕಿಚ್ಚನ ಹೇಳಿಕೆಗೆ ಗರಂ ಆದ ಮಹಿಳೆಯರು!
ಬೆಂಗಳೂರು: ಕಳೆದ ಕೆಲವು ದಿನಗಳಿಂದಲೂ ಸ್ಯಾಂಡಲ್‌ವುಡ್‌ನಲ್ಲಿ ಪೈಲ್ವಾನ್ ಪೈರಸಿ ವಿಚಾರವಾಗಿ ಫ್ಯಾನ್ ವಾರ್ ನಡೆಯುತ್ತಿರುವ ಬೆನ್ನಲ್ಲೇ ನಿನ್ನೆಯಷ್ಟೇ ಪೈರಸಿ ಮಾಡಿದ್ದ ರಾಕೇಶ್ ಎನ್ನಲಾದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಫ್ಯಾನ್ ವಾರ್‌ನಿಂದ ಸ್ಟಾರ್ ವಾರ್‌ಗೆ ವೇದಿಕೆ ಮಾಡಿಕೊಟ್ಟಂತಾಗಿದೆ.
ಈ ಕುರಿತು ಟ್ವೀಟ್ ಮಾಡಿದ್ದ ಕಿಚ್ಚಾ ಸುದೀಪ್ ಅವರ ಪದ ಬಳಕೆ ಇದೀಗ ವಿವಾದವನ್ನು ಸೃಷ್ಟಿಸಿದೆ. ಬಳೆ ತೊಟ್ಟವರು ಶಕ್ತಿಹೀನರು, ಕಡಗ ತೊಟ್ಟವರು ಮಾತ್ರ ಪರಾಕ್ರಮಶಾಲಿಗಳು ಎನ್ನುವ ಅರ್ಥವನ್ನು ಸುದೀಪ್ ಟ್ವೀಟ್ ನೀಡುತ್ತಿದ್ದು, ಇದು ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ.
ಸ್ಯಾಂಡಲ್‌ವುಡ್ ನಟಿ ನೀತು ಶೆಟ್ಟಿ ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, ನಾವೇನು ಸೀರೆ ಉಟ್ಟಿಲ್ಲ, ಬಳೆ ತೊಟ್ಟಿಲ್ಲ, ಹೂವು ಮುಡ್ಕೊಂಡಿಲ್ಲ…. ಇದನ್ನೇ ಆಂಗ್ಲ ಭಾಷೆಯಲ್ಲಿ ಸೆಕ್ಸಿಸ್ಟ್ ಅನ್ನೋದು. ಶೌರ್ಯ ಪ್ರದರ್ಶನಕ್ಕೆ ಗಂಡು ಮಕ್ಕಳು ಹೇಳುವ ಕೆಲವು ಅರ್ಥವಿಲ್ಲದ ಅವಮಾನಕರ ವಾಕ್ಯಗಳು ಎಂದು ಕಿಡಿಕಾರಿದ್ದಾರೆ.
ನಟರು ಆಫ್ಟರಾಲ್ ನಟರು. ಅವರಿಗೆ ಜೆಂಡರ್ ಸೆನ್ಸಿಟಿವಿಟಿ ಇರಬೇಕು ಎಂದು ನಾವು ನಿರೀಕ್ಷಿಸಬಾರದು ಅಲ್ವಾ? ಬಳೆ ಹಾಕೊಂಡಿದಾರೆ ಅಂದ್ರೆ ಏನಂತೆ ಪ್ರಾಬ್ಲಮ್ಮು? ಬಳೆ ತೊಡೋರು ಹಣ್ಮಕ್ಕಳು. ಅವರು ವೀಕ್ ಅಂತಾನಾ? ಈ ಸಮಾಜ ಇಂತಹ ಸ್ಟೀರಿಯೋಟೈಪ್‌ಗಳಿಂದ ಹೊರಬರುವುದು ಯಾವಾಗ? ಕೊನೆಪಕ್ಷ ಸೆಲೆಬ್ರಿಟಿಗಳು ಜವಾಬ್ದಾರಿಯಿಂದ ಮಾತನಾಡಲು ಕಲಿಯೋದು ಯಾವಾಗ? ಸಿನಿಮಾ ಡೈಲಾಗ್ ಆಗಿದ್ದಿದ್ರೆ ಪಾತ್ರದ ಅಗತ್ಯ ಅನ್ಬೋದಿತ್ತು. ಇದು ಸ್ವಂತದ ಸ್ಟೇಟ್‌ಮೆಂಟ್. ಸೀರಿಯಸ್ಲಿ ಇವರಿಗೆಲ್ಲ ಲಿಂಗಸಂವೇದನೆ ಮತ್ತು ಭಾಷೆ ಬಗ್ಗೆ ಒಂದು ವರ್ಕ್ ಶಾಪ್ ಅಗತ್ಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತೋರ್ವ ಬಳಕೆದಾರರು.
ಒಟ್ಟಿನಲ್ಲಿ ಪೈರಸಿ ವಿಚಾರವಾಗಿ ಫ್ಯಾನ್ ವಾರ್, ಸ್ಟಾರ್ ವಾರ್‌ಗಳ ಮಧ್ಯೆ ಪದಬಳಕೆಯೇ ಇದೀಗ ಸಮಸ್ಯೆಯಾಗಿ ಪರಿಣಮಿಸಿದೆ .
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ