ಸಿಒಎಸ್‌ಸಿ ಮುಖ್ಯಸ್ಥರಾಗಿ ಇಂದು ರಾವತ್‌ ಅಧಿಕಾರ ಸ್ವೀಕಾರ

ಭಾರತೀಯ ಸಶಸ್ತ್ರ ದಳದ ಮೂರು ಪಡೆಗಳ (ಭೂ, ವಾಯು, ನೌಕೆ) ಮುಖ್ಯಸ್ಥರು 

ಚೀಫ್ಸ್‌ ಆಫ್‌ ಸ್ಟಾಫ್‌ ಕಮಿಟಿ (ಸಿಒಎಸ್‌ಸಿ)ಯಲ್ಲಿರುತ್ತಾರೆ. ಇವರ ಪೈಕಿ ಸೇವಾ 

ಹಿರಿತನ ಹೊಂದಿರುವವರು ಸಮಿತಿ ಅಧ್ಯಕ್ಷರಾಗುತ್ತಾರೆ. 



ಹೊಸದಿಲ್ಲಿ: ಸೇನಾಪಡೆಗಳ 'ಚೀಫ್ಸ್ ಆಫ್‌ ಸ್ಟಾಪ್‌ ಕಮಿಟಿ' ಮುಖ್ಯಸ್ಥರಾಗಿ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಮೇ 29ರಂದು ಅಂದಿನ ನೌಕಾಪಡೆ ಮುಖ್ಯಸ್ಥ ಸುನಿಲ್‌ ಲಂಬಾ ಅವರಿಂದ ಹಾಲಿ ವಾಯುಪಡೆ ಮುಖ್ಯಸ್ಥ ಬಿ.ಎಸ್‌.ಧನೋವಾ ಅವರು ಅಧಿಕಾರ ಸ್ವೀಕರಿಸಿದ್ದರು. 

ಧನೋವಾ ಈ ಮಾಸಾಂತ್ಯಕ್ಕೆ ನಿವೃತ್ತಿ ಹೊಂದಲಿದ್ದಾರೆ. ಭಾರತೀಯ ಸಶಸ್ತ್ರ ದಳದ ಮೂರು ಪಡೆಗಳ (ಭೂ, ವಾಯು, ನೌಕೆ) ಮುಖ್ಯಸ್ಥರು ಚೀಫ್ಸ್‌ ಆಫ್‌ ಸ್ಟಾಫ್‌ ಕಮಿಟಿ (ಸಿಒಎಸ್‌ಸಿ)ಯಲ್ಲಿರುತ್ತಾರೆ. ಇವರ ಪೈಕಿ ಸೇವಾ ಹಿರಿತನ ಹೊಂದಿರುವವರು ಸಮಿತಿ ಅಧ್ಯಕ್ಷರಾಗುತ್ತಾರೆ.

ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಸವಾಲುಗಳನ್ನು ಮಟ್ಟಹಾಕಲು ಮೂರು ಪಡೆಗಳ ನಡುವೆ ಸಾಮರಸ್ಯ ಸಾಧಿಸಿಒಗ್ಗಟ್ಟಿನ ರಣತಂತ್ರ ರೂಪಿಸುವುದು ಸಮಿತಿ ಮುಖ್ಯಸ್ಥರ ಹೊಣೆ. ಜನರಲ್‌ ರಾವತ್‌ ಡಿ.31ಕ್ಕೆ ನಿವೃತ್ತರಾಗಲಿದ್ದಾರೆ.
                  ………………………...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?