ಉಗ್ರಪೋಷಕರು ನಮ್ಮ ಬಗ್ಗೆ ಮಾತನಾಡಲು ಯೋಗ್ಯರಲ್ಲ: ವಿಶ್ವ ವೇದಿಕೆಯಲ್ಲಿ ಇಮ್ರಾನ್‌ ಜಾತಕ ಜಾಲಾಡಿದ ಮೈತ್ರಾ

ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿ, ಸುಳ್ಳು ಆರೋಪ 

ಮಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭಾರತ ದಿಟ್ಟ ಉತ್ತರ ನೀಡಿದೆ. 



ನ್ಯೂಯಾರ್ಕ್: ಅಮೆರಿಕದ ಮೇಲೆ ದಾಳಿ ನಡೆಸಿದ ಒಸಾಮಾ ಬಿನ್‌ ಲಾಡೆನ್‌ಗೆ ಬಹಿರಂಗ ಬೆಂಬಲ ನೀಡಿದವರು ಯಾರು? ವಿಶ್ವಸಂಸ್ಥೆ ನಿಷೇಧ ಹೇರಿರುವ 130 ಉಗ್ರರು ಮತ್ತು 25 ಉಗ್ರ ಸಂಘಟನೆಗಳನ್ನು ಸಾಕುತ್ತಿರುವ ದೇಶ ಯಾವುದು?
ಇದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿ, ಕಪೋಲಕಲ್ಪಿತ ಆರೋಪಗಳನ್ನು ಮಾಡಿದ್ದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭಾರತ ಕೊಟ್ಟ ದಿಟ್ಟ ಪ್ರತ್ಯುತ್ತರದ ಸ್ಯಾಂಪಲ್‌.

ಇಮ್ರಾನ್‌ ಖಾನ್‌ ಆರೋಪಗಳಿಗೆ ತಿರುಗೇಟು ನೀಡಲು 'ಪ್ರತ್ಯುತ್ತರ ಹಕ್ಕು' ಬಳಸಿಕೊಂಡ ಭಾರತ, ಪಾಕ್‌ ಮಾಡಿದ ಒಂದೊಂದು ಆರೋಪಗಳನ್ನೂ ಹೆಕ್ಕಿ, ಅವುಗಳಿಗೆ ಖಡಕ್‌ ತಿರುಗೇಟು ನೀಡಿತು. ವಿಶ್ವಸಂಸ್ಥೆಯಲ್ಲಿಭಾರತದ ಕಾಯಂ ರಾಯಭಾರಿ-1 ಆಗಿರುವ ವಿದಿಶಾ ಮೈತ್ರಾ ಅವರ ಮಾತಿಗೆ ಪಾಕಿಸ್ತಾನ ಅಕ್ಷರಶಃ ತಬ್ಬಿಬ್ಬಾಯಿತು. ಇತ್ತೀಚೆಗೆ ಈ ಹುದ್ದೆಗೆ ನೇಮಕಗೊಂಡಿದ್ದರೂ ವಿದಿಶಾ ತಮ್ಮ ಪ್ರಖರ ನುಡಿಗಳ ಮೂಲಕ ಗಮನ ಸೆಳೆದರು.

ಮಹಾಧಿವೇಶನದಲ್ಲಿಇಮ್ರಾನ್‌ ಖಾನ್‌ 15 ನಿಮಿಷಗಳ ಸಮಯಾವಕಾಶ ಮೀರಿ 50 ನಿಮಿಷಗಳ ಕಾಲ ಮಾತನಾಡಿದ್ದಲ್ಲದೆ, ಮಾತಿನುದ್ದಕ್ಕೂ ಯುದ್ಧ, ದ್ವೇಷ, ಹಗೆತನ, ಅಣ್ವಸ್ತ್ರ ಇತ್ಯಾದಿ ಪದಗಳನ್ನು ಬಳಸಿದ್ದರು.

ವಿಶ್ವ ವೇದಿಕೆ ದುರ್ಬಳಕೆ

ವಿಶ್ವಸಂಸ್ಥೆಯ ಶ್ರೇಷ್ಠ ವೇದಿಕೆಯ ಮೇಲೆ ನಿಂತು ಆಡುವ ಪ್ರತಿಯೊಂದು ಪದವೂ ಐತಿಹಾಸಿಕ ಘನತೆಯನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ. ಆದರೆ, ಇಮ್ರಾನ್‌ ಅವರು ಇಂಥ ವೇದಿಕೆಯಲ್ಲಿ'ದ್ವೇಷ ಭಾಷಣ' ಮಾಡಿದ್ದಾರೆ, ವಿಭಜನೆಯ ಮಾತು ಆಡಿದ್ದಾರೆ. ವಿಶ್ವ ವೇದಿಕೆಯನ್ನು ಇದುವರೆಗೂ ಯಾರೂ ಇಷ್ಟರಮಟ್ಟಿಗೆ ದುರ್ಬಳಕೆ ಮಾಡಿಕೊಂಡಿರಲಿಲ್ಲ.

ವಿದಿಷಾ ಮೈತ್ರಾ ಇಮ್ರಾನ್‌ಗೆ ತಪರಾಕಿ

* ವಿಶ್ವಸಂಸ್ಥೆ ನಿಷೇಧಿಸಿರುವ ಅಲ್‌-ಖಾಯಿದಾ ಮತ್ತು ಇತರೆ ಜಿಹಾದಿ ಉಗ್ರರಿಗೆ ಪಿಂಚಣಿ ನೀಡುತ್ತಿರುವ ವಿಶ್ವದ ಏಕೈಕ ಸರಕಾರ ಯಾವುದು?

* ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ಮೊದಲು ಪಾಕಿಸ್ತಾನ ಅದರ ನೆಲದಲ್ಲಿನ ಅಲ್ಪಸಂಖ್ಯಾತರ ಶೋಷಣೆ ಬಗ್ಗೆ ಕಣ್ಣು ತೆರೆಯಲಿ.

* 1947ರಲ್ಲಿದೇಶದ 23ರಷ್ಟಿದ್ದ ಅಲ್ಪಸಂಖ್ಯಾತರನ್ನು ಈಗ 3%ಗೆ ಇಳಿಸಲಾಗಿದೆ. ಹಿಂದೂ, ಸಿಖ್‌, ಕ್ರೈಸ್ತ, ಶಿಯಾ, ಸಿಂಧಿ, ಬಲೂಚಿಗಳನ್ನು ಚಿತ್ರಹಿಂಸೆ ಮತ್ತು ಶೋಷಣೆಗೆ ಒಳಪಡಿಸಿ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ.

*ಪಾಕಿಸ್ತಾನದಲ್ಲಿಒಂದೇ ಒಂದು ಉಗ್ರ ಸಂಘಟನೆಯೂ ಇಲ್ಲ, ಬೇಕಿದ್ದರೆ ಬಂದು ಪರಿಶೀಲಿಸಿ ಎಂದು ಮಾತು ಕೊಟ್ಟ ಇಮ್ರಾನ್‌ ಮಾತಿಗೆ ಬದ್ಧರಾಗಿ ನಿಲ್ಲುತ್ತಾರಾ?

* ದ್ವೇಷ ಸಿದ್ಧಾಂತದ ಮೇಲೆ ಭಯೋತ್ಪಾದನೆ ಸಾಮ್ರಾಜ್ಯ ಕಟ್ಟಿರುವ ದೇಶವೊಂದರ ನಾಯಕರಿಗೆ ಭಾರತ/ ಭಾರತೀಯರ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲ.

ಬಸ್‌ ಹೈಜಾಕ್‌ಗೆ ಯತ್ನಿಸಿದ 3 ಉಗ್ರರ ಎನ್‌ಕೌಂಟರ್‌

ಶ್ರೀನಗರ: ಜಮ್ಮು-ಕಿಶ್ತಾ$್ವರ್‌ ರಾ. ಹೆದ್ದಾರಿಯಲ್ಲಿಪ್ರಯಾಣಿಕರಿದ್ದ ಬಸ್‌ ಹೈಜಾಕ್‌ ಮಾಡಲು ಯತ್ನಿಸಿದ್ದ ಉಗ್ರರಲ್ಲಿಮೂವರನ್ನು ಹೊಡೆದುರುಳಿಸಲಾಗಿದೆ. ಸಮಯಪ್ರಜ್ಞೆ ಮೆರೆದ ಚಾಲಕ ಬಸ್‌ ನಿಲ್ಲಿಸದೆ ಮುಂದೆ ಸಾಗಿ ಸೇನೆಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಕಾರ್ಯಾಚರಣೆಗಿಳಿದ ಸಿಆರ್‌ಪಿಎಫ್‌ ಯೋಧರು ಬಟೋಟ್‌ ಮಾರುಕಟ್ಟೆ ಪ್ರದೇಶದ ಮನೆಯಲ್ಲಿಅಡಗಿದ್ದ ಉಗ್ರರನ್ನು ಸುದೀರ್ಫ ಎನ್‌ಕೌಂಟರ್‌ನಲ್ಲಿಬಲಿ ಪಡೆದರು. ಈ ವೇಳೆ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಈ ನಡುವೆ, ಎಲ್‌ಒಸಿ ಬಳಿ ಭದ್ರತಾ ಪಡೆ ಮೇಲೆ ದಾಳಿ ನಡೆಸಿದ ಉಗ್ರನನ್ನು ಕೊಂದು ಹಾಕಲಾಗಿದೆ.

1971ರ ಯುದ್ಧದಲ್ಲಿಪಾಕಿಸ್ತಾನಕ್ಕೆ ತಡೆಯಲಾರದ ಹೊಡೆತ ನೀಡಿದ್ದ ನೌಕಾಪಡೆ ಈಗ ಇನ್ನಷ್ಟು ದೊಡ್ಡ ಹಾನಿಯನ್ನು ಮಾಡಲು ಶಕ್ತವಾಗಿದೆ.
- ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ (ಐಎನ್‌ಎಸ್‌ ಖಂಡೇರಿ, ಐಎನ್‌ಎಸ್‌ ನೀಲಗಿರಿಯನ್ನು ನೌಕಾಪಡೆಗೆ ಸಮರ್ಪಿಸಿದ ಬಳಿಕ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?