ಕೇಂದ್ರದ ಸಾಲಮೇಳ ಯೋಜನೆ ಶ್ಲಾಘಿಸಿದ ಜನಾರ್ದನ ಪೂಜಾರಿ
ಮಂಗಳೂರು: ನರೇಂದ್ರ ಮೋದಿ ಅವರನ್ನು ಈ ಹಿಂದೆ ಕಟುವಾಗಿ ಟೀಕಿಸುತ್ತಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ಈಗ ಕೇಂದ್ರದ ಸಾಲಮೇಳ ಯೋಜನೆಯನ್ನು ಶ್ಲಾಘಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಾಲಮೇಳ ಯೋಜನೆ ಅದ್ಭುತವಾದುದು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಯೋಜನೆಗೆ ಬೆನ್ನೆಲುಬಾಗಿ ನಿಂತ ಪ್ರಧಾನಿ ಹಾಗೂ ಮಂತ್ರಿಮಂಡಲಕ್ಕೆ ದೇವರು ಒಳ್ಳೆಯದು ಮಾಡಲಿ ಎಂದರು.
ನಿರ್ಮಲಾ ಸೀತಾರಾಮನ್ ಅವರನ್ನು ಇಂದಿರಾ ಗಾಂಧಿ ಅವರಿಗೆ ಹೋಲಿಸಿದ ಪೂಜಾರಿ, ಆರಂಭದಲ್ಲಿ ಟೀಕೆಗೆ ಒಳಪಡಬೇಕಾಗುತ್ತದೆ. ನನ್ನನ್ನು ಮತ್ತು ಇಂದಿರಾ ಗಾಂಧಿಯವರನ್ನು ಕೂಡ ಭಾರಿ ಟೀಕೆ ಮಾಡಿದ್ದರು. ಆದರೆ, ಈ ದೇಶದ ಬಡವರ ಕಣ್ಣೀರು ಒರೆಸುವ ಕೆಲಸವಿದು. ಸಾಲಮೇಳ ಯೋಜನೆಗೆ ನನ್ನ ಬೆಂಬಲವಿದೆ. ಟೀಕೆಗಳಿಗೆ ಕಿವಿಗೊಡದೆ ಬಡವರ ಕಷ್ಟ ನಿವಾರಿಸುವ ಕೆಲಸ ಮಾಡಿ ಎಂದು ಹೇಳಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ