ನರೇಂದ್ರ ಮೋದಿ ಭಾರತದ ಪ್ರಧಾನ ಮಂತ್ರಿ, ಅವರನ್ನು ಗೌರವಿಸಿ: ರಾಹುಲ್​ಗೆ ಟಾಂಗ್​ ನೀಡಿದ ಶಶಿ ತರೂರ್


ನವದೆಹಲಿ: ಅಮೆರಿಕದ ಹ್ಯೂಸ್ಟನ್​ನಲ್ಲಿ ಭಾರತೀಯ ಸಮುದಾಯದವರು ಸೆ.22ರಂದು ಆಯೋಜಿಸಿರುವ ‘ಹೌಡಿ ಮೋದಿ’ ಕಾರ್ಯಕ್ರಮವನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ಹಿರಿಯ ನಾಯಕ ಶಶಿ ತರೂರ್​, ನರೇಂದ್ರ ಮೋದಿ ಭಾರತದ ಪ್ರಧಾನ ಮಂತ್ರಿ, ಅವರನ್ನು ನಾವು ಗೌರವಿಸಬೇಕು ಎಂದು ರಾಹುಲ್​ಗೆ ಟಾಂಗ್​ ನೀಡಿದ್ದಾರೆ.
ಸೆ. 18 ರಂದು ನರೇಂದ್ರ ಮೋದಿ ಅವರ ಹೌಡಿ ಮೋದಿ ಕಾರ್ಯಕ್ರಮವನ್ನು ಟೀಕಿಸಿ ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದರು. ಇದಕ್ಕೆ ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ್ದ ಶಶಿ ತರೂರ್​ ವಿಪಕ್ಷ ಸಂಸದನಾದ ನಾನು ನರೇಂದ್ರ ಮೋದಿ ಅವರ ನೀತಿ, ಹೇಳಿಕೆಗಳು, ಕೆಲಸಗಳನ್ನು ಮತ್ತು ಅವರ ವೈಫಲ್ಯಗಳನ್ನು ಟೀಕಿಸುವ ಹಕ್ಕು ಇದೆ. ಆದರೆ ಅವರು ವಿದೇಶಕ್ಕೆ ಹೋದಾಗ ಅವರು ಭಾರತದ ಪ್ರಧಾನ ಮಂತ್ರಿ, ಅವರು ಭಾರತದ ಧ್ವಜವನ್ನು ವಿದೇಶದಲ್ಲಿ ಹಾರಿಸಲು ಹೋಗಿರುತ್ತಾರೆ. ಹಾಗಾಗಿ ಅವರನ್ನು ನಮ್ಮ ದೇಶದ ಪ್ರಧಾನಮಂತ್ರಿ ಎಂದು ಗೌರವ ನೀಡಬೇಕು ಎಂದು ತಿಳಿಸಿದ್ದರು.

ಟ್ವೀಟ್​ ಮಾಡಿದ ಸ್ವಲ್ಪ ಸಮಯದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ತರೂರ್​, ಭಾರತದೊಳಗೆ ಮೋದಿ ಅವರ ನೀತಿಗಳು, ಅವರು ಮಾಡಿರುವ ತಪ್ಪುಗಳ ಕುರಿತು ಮಾತನಾಡಲು ಸಾಕಷ್ಟು ವಿಷಯಗಳಿವೆ. ಆದರೆ, ನಮ್ಮ ದೇಶದ ಹೊರಗೆ ಅವರು ಭಾರತದ ಪ್ರಧಾನ ಮಂತ್ರಿ, ಹಾಗಾಗಿ ಅವರನ್ನು ಗೌರವಿಸಬೇಕು ಎಂದು ತಿಳಿಸಿದರು.
ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಶಿ ತರೂರ್​​, ಪ್ರಧಾನಿ ನರೇಂದ್ರ ಮೋದಿಯನ್ನು ಪ್ರತಿಯೊಂದು ವಿಷಯಕ್ಕೂ ಟೀಕಿಸುವ ಅಗತ್ಯವಿಲ್ಲ. ಅವರ ವಿರುದ್ಧ ರಚನಾತ್ಮಕ ಟೀಕೆ ಮಾಡಬೇಕು ಎಂದು ತಿಳಿಸಿದ್ದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?