ಲ್ಯಾಂಡರ್ ವಿಕ್ರಂಗೆ ಗುಡ್‌ನೈಟ್ ಹೇಳುವ ಸಮಯ : ಯಶಸ್ವಿಯಾಯ್ತು ಚಂದ್ರಯಾನ ಮಿಷನ್
ಚಂದ್ರಯಾನ 2 ಯಶಸ್ವಿಯಾಗುವ ಕೊನೇ ಕ್ಷಣಗಳಲ್ಲಿ ಲ್ಯಾಂಡರ್ ವಿಕ್ರಂ ಇಸ್ರೋ
ಜತೆಗೆ ಸಂಪರ್ಕ ಕಡಿದುಕೊಂಡು ಕುಸಿದು ಬಿದ್ದಿತ್ತು. ಸೆಪ್ಟೆಂಬರ್ 7ರಿಂದಲೂ ಮತ್ತೆ
ಸಂಪರ್ಕ ಸಾಧಿಸಲು ಪ್ಗರಯತ್ನಿಸುತ್ತಲೇ ಇದ್ದಾರೆ. ಆದರೆ ವಿಕ್ರಂ ಇಳಿದಿರುವ
ಸ್ಥಳದಲ್ಲಿ ಈಗ ಕತ್ತಲಾವರಿಸುತ್ತಿದೆ. ಸೌರಶಕ್ತಿಯಿಂದಲೇ ಕಾರ್ಯನಿರ್ವಹಿಸುವ
ವಿಕ್ರಂ ಚಿರನಿದ್ರೆಗೆ ಜಾರಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-2 ಬಹುಪಾಲು ಯಶಸ್ವಿಯಾಗಿದೆ. ಯೋಜನೆಯ ಶೇ.98ರಷ್ಟು ಉದ್ದೇಶಗಳು ಈಡೇರಿವೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ದೃಢಪಡಿಸಿದ್ದಾರೆ. ಆದರೆ, ಚಂದ್ರಯಾನ 2ರ ಲ್ಯಾಂಡರ್ ವಿಕ್ರಂ ಕುಸಿದು ಬಿದ್ದಿದ್ದ ಜಾಗದಲ್ಲಿ ಇಂದಿನಿಂದ (ಸೆಪ್ಟೆಂಬರ್ 21) 14 ದಿನಗಳ ಕಾಲ ಕತ್ತಲಾವರಿಸಲಿದೆ. ವಿಜ್ಞಾನಿಗಳು ಇನ್ನೂ ವಿಕ್ರಂ ಜತೆ ಸಂಪರ್ಕ ಸಾಧಿಸುವಲ್ಲಿ ನಿರತರಾಗಿದ್ದಾರೆ. ಆದರೆ, ಇನ್ನುಮುಂದೆ ಸೂರ್ಯನ ಬೆಳಕಿಲ್ಲದೆ ವಿಕ್ರಂ ಸಂಪರ್ಕ ಸಾಧ್ಯವಾಗದೆ ಇರಬಹುದು.
ಚಂದ್ರಯಾನ 2ರ ಉದ್ದೇಶಿತ 14 ದಿನದೊಳಗೆ ವಿಕ್ರಂ ಸಂಪರ್ಕ ಸಾಧಿಸಬೇಕಿತ್ತು. ಅಂದರೆ ಲ್ಯಾಂಡರ್ ವಿಕ್ರಂ ಚಂದ್ರನ ಅಂಗಳ ತಲುಪಿದ (ಸೆಪ್ಟೆಂಬರ್ 7) ದಿನದಿಂದ ಇಂದಿನವರೆಗೆ ( ಸೆಪ್ಟೆಂಬರ್ 21) ಮಾತ್ರ ಮಾತ್ರ ವಿಕ್ರಂ ಇಳಿದಿರುವ ಸ್ಥಳದಲ್ಲಿ ಸೂರ್ಯನ ಬೆಳಕಿತ್ತು. ಆದರೆ, ಇಂದಿನಿಂದ 14 ದಿನಗಳ ಕಾಲ ಕತ್ತಲಿರುತ್ತದೆ. ಲ್ಯಾಂಡರ್ ವಿಕ್ರಂ ಪೂರ್ಣವಾಗಿ ಸೌರಶಕ್ತಿ ಆಧಾರದಲ್ಲಿ ಕಾರ್ಯನಿರ್ವಹಿಸುವುದರಿಂದ ಸೂರ್ಯನ ಕಿರಣಗಳಿಲ್ಲದೆ ಕಾರ್ಯನಿರ್ವಹಿಸುವುದು ಅಸಾಧ್ಯ. ಈ ಅವಧಿಯಲ್ಲಿ ವಿಕ್ರಂ ಪೂರ್ಣವಾಗಿ ಸ್ಥಗಿತಗೊಳ್ಳುವ ಸಂಭವವಿದೆ.
ಭೂಮಿಯ ಒಂದುತಿಂಗಳು ಚಂದ್ರನಿಗೆ ಒಂದು ದಿನ
ಭೂಮಿಯ ಭ್ರಮಣೆ ಮತ್ತು ಚಂದ್ರನ ಪರಿಭ್ರಮಣಿ ಸಮಕಾಲಿಕವಾಗಿರುವುದರಿಂದ ವರ್ಷದ ಎಲ್ಲ ದಿನಗಳೂ, ಎಲ್ಲ ಕಾಲದಲ್ಲೂ ಚಂದ್ರನ ಒಂದು ಮುಖ ಮಾತ್ರವೇ ಭೂಮಿಗೆ ಗೋಚರವಾಗುತ್ತದೆ. ಅಂದರೆ ನಮಗೆ ಕಾಣುವ ಚಂದ್ರ ಕೇವಲ ಅರ್ಧ ಭಾಗ (56%) ಮಾತ್ರ. ಉಳಿದರ್ಧ ಭಾಗ ಯಾವಾಗಲೂ ಭೂಮಿಗೆ ವಿರುದ್ಧ ದಿಕ್ಕಿನಲ್ಲೇ ಇರುತ್ತದೆ. ಭೂಮಿಯಿಂದ ಕಾಣುವ ಚಂದ್ರನ ಮುಖವನ್ನು ಮುಮ್ಮುಖವೆಂದು ಮತ್ತು ಅದರ ವಿರುದ್ಧ ದಿಕ್ಕಿನಲ್ಲಿರುವ ಮುಖವನ್ನು ಹಿಮ್ಮುಖವೆಂದು ಕರೆಯಲಾಗುತ್ತದೆ. ಹುಣ್ಣಿಮೆಯ ದಿನ ಚಂದ್ರನ ಕಾಣದ ಮುಖದಲ್ಲಿ ಅಮಾವಾಸ್ಯೆಯಾಗಿರುತ್ತದೆ. ಹಾಗೆಯೇ ಅಮಾವಾಸ್ಯೆಯ ದಿನ ಕಾಣದ ಮುಖದಲ್ಲಿ ಹುಣ್ಣಿಮೆ. ಭೂಮಿಯ ಒಂದು ತಿಂಗಳಿನ ಅವಧಿಯಲ್ಲಿ ಚಂದ್ರನಲ್ಲಿ ಕೇವಲ ಒಂದು ಹಗಲು ಮತ್ತು ಒಂದು ರಾತ್ರಿಗಳಾಗಿರುತ್ತವೆ. ಇದೀಗ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಂ ಕುಸಿದು ಬಿದ್ದಿರುವ ಪ್ರದೇಶದಲ್ಲಿ ಹಗಲು ಕಳೆದು ಕತ್ತಲು ಆವರಿಸುತ್ತಿದೆ. ಇದೀಗ ಲ್ಯಾಂಟರ್ ವಿಕ್ರಂಗೆ ಗುಡ್ ನೈಟ್ ಹೇಳುವ ಸಮಯ ಬಂದಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ